ಮೂಡುಬಿದಿರೆ : ಕ್ರೀಡಾ ಸಚಿವರಾಗಿದ್ದ ಸಂದರ್ಭದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಲ್ಲದೆ ಕ್ರೀಡಾಪಟುಗಳಿಗೆ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಕರೆ ನೀಡುತ್ತಿದ್ದ ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ಪ್ರತಿದಿನ 15 ರಿಂದ20 ಕಿ.ಮೀನಷ್ಟು ಸೈಕಲ್ ಸವಾರಿ ಮಾಡುವ ಮೂಲಕ ತನ್ನ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಜೈನ್ ಅವರು ಇದೀಗ 71ರ ಹರೆಯದಲ್ಲೂ ಬಾಸ್ಕೆಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್, ಕಬಡ್ಡಿ ಮುಂತಾದ ಕ್ರೀಡೆಗಳನ್ನು ಪ್ರತಿದಿನ ಆಡುತ್ತಿರುವುದಲ್ಲದೆ ವಾಕಿಂಗ್, ತನ್ನ ಚಾಲಕ ಬರುವುದಕ್ಕಿಂತ ಮೊದಲು ಕಾರು ಮತ್ತು ಬಸ್ ಡ್ರೈವಿಂಗನ್ನು ತಾನೇ ಮಾಡಿಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಮೂಡುಬಿದಿರೆವರೆಗೆ ಬಸ್ಸಿನಲ್ಲಿ ಬಂದು ನಂತರ ಮನೆಗೆ ಹೋಗಲು ಮೂಡುಬಿದಿರೆಯಿಂದ ಆಟೋವನ್ನೇ ಬಳಸಿಕೊಳ್ಳುವ ಮೂಲಕ ಮಾದರಿಯಾಗಿದ್ದ ಅಭಯಚಂದ್ರ ಅವರು ಇದೀಗ ತಾನು ಸೈಕಲ್ ಸವಾರಿ ಮಾಡುವ ಮೂಲಕ ಜಿಮ್‍ಗೆ ಹೋಗಿ ತಮ್ಮ ಫಿಟ್‍ನೆಸನ್ನು ಕಾಪಾಡಿಕೊಳ್ಳುತ್ತಿರುವ ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬ ಸಂದೇಶವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
Kshetra Samachara
09/10/2020 01:43 pm