ಮಣಿಪಾಲ: ಮೊನ್ನೆ (ಗುರುವಾರ) ರಾತ್ರಿ ಪರ್ಕಳ ಹೆರ್ಗ ಸಮೀಪದ ಗೋಳಿಕಟ್ಟೆಯ ನಿವೃತ್ತ ಶಿಕ್ಷಕ ಬಾಲಚಂದ್ರ ಕೆದ್ಲಾಯರವರ ಮನೆಗೆ ಚಿರತೆ ಬಂದಿತ್ತು. ನಾಯಿ ಬೇಟೆಗೆ ಬಂದಿದ್ದ ಈ ಚಿರತೆಯ ಚಲನವಲನ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಿನ್ನೆ (ಶುಕ್ರವಾರ) ವರದಿ ಪ್ರಕಟಿಸಿತ್ತು.ಆದರೆ ಬಾಲಚಂದ್ರ ಅವರ ಸಾಕು ನಾಯಿ ಟಾಮಿ ಚಿರತೆಯ ಬೇಟಿಗೆ ಬಲಿಯಾಗದೆ ಬದುಕುಳಿದಿತ್ತು! ಚಿರತೆಯು ಬಾಲಚಂದ್ರ ಕೆದ್ಲಾಯರ ಸಾಕು ನಾಯಿ ಟಾಮಿ ಬೇಟೆಗೆ ಬಂದು ಕುತ್ತಿಗೆಗೆ ಬಲವಾದ ಗಾಯ ಮಾಡಿತ್ತು. ಈಸಾಕು ನಾಯಿ ಜೀವ ಉಳಿಸುವುದಕ್ಕಾಗಿ ಹೊರಾಟ ನಡೆಸಿ ಕೊನೆಗೆ ಸತ್ತಂತೆ ನಟಿಸಿದೆ! ಈ ಸಂದರ್ಭ ಮನೆಯವರಿಗೆ ಎಚ್ಚರವಾಗಿ ಟಾರ್ಚ್ ಹಾಕಿ ಹೊರಬಂದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ! ಈ ಘಟನೆ ನಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಜೀವ ಉಳಿಸಿಕೊಳ್ಳಲು ಟಾಮಿ ಕೊನೆ ಕ್ಷಣದ ತನಕ ಹೋರಾಡಿ, ಬದುಕಿದೆಯಾ ಬಡಜೀವ ಎಂಬಂತೆ ತನ್ನ ಜೀವ ಉಳಿಸಿಕೊಂಡಿದೆ!
Kshetra Samachara
13/08/2022 06:19 pm