ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ತರಗತಿ, ದೇಶದಿಂದಲೇ ಹೊರಹಾಕಬಹುದು, ಕತ್ತಿಯಂತೆ ಹರಿತವಾಗಿ ಮತ್ತೆ ಎದ್ದು ನಿಲ್ಲುತ್ತೇವೆ"

ಮಂಗಳೂರು: ನಮ್ಮನ್ನು ತರಗತಿಯಿಂದ, ಗ್ರಂಥಾಲಯದಿಂದ ತುಳಿದು ಹೊರಗೆ ಹಾಕಬಹುದು. ಕೊನೆಗೆ ದೇಶದಿಂದಲೂ ನಮ್ಮನ್ನು ಹೊರ ಹಾಕಬಹುದು.‌ ಆದರೆ, ನಾವು ಮತ್ತೆ ಕತ್ತಿಯಂತೆ ಹರಿತವಾಗಿ ಎದ್ದು ನಿಲ್ಲುತ್ತೇವೆ ಎಂದು ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹೇಳಿದರು.

ನಗರದ ಪುರಭವನದಲ್ಲಿ‌ ನಡೆದ ಸಿಎಫ್ಐ ಗರ್ಲ್ಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿ,‌ ಈ ದೇಶದಲ್ಲಿ4 ವರ್ಷಗಳಲ್ಲಿ ಮಹಿಳಾ ದೌರ್ಜನ್ಯ 70% ಏರಿದೆ. ಹಿಜಾಬ್ ಗೆ ಹಾಕುವ ನಿಷೇಧವನ್ನು ಆಸಿಡ್ ಮೇಲೆ ಹಾಕಿದ್ರೆ ದೌರ್ಜನ್ಯ ‌ನಿಲ್ತಿತ್ತು.‌ ವಿದ್ಯಾರ್ಥಿಗಳ ಪೋಷಕರು ಅವರನ್ನು ‌ಗಮನಿಸದಿದ್ದಲ್ಲಿ ಅವರು ರೌಡಿಗಳು, ಗೂಂಡಾಗಳು ಆಗ್ತಾರೆ. ಅವರು ತ್ರಿಶೂಲ ದೀಕ್ಷೆ ಪಡೆದು ವಿದ್ಯಾರ್ಥಿಗಳಿಗೆ ಚುಚ್ಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಹಿಜಾಬ್ ಸಂತ್ರಸ್ತೆ ಆಲಿಯಾ ಅಸಾದಿ ಮಾತನಾಡಿ, ಹಿಜಾಬ್ ಹೋರಾಟದ ಬಳಿಕ ನಾವು ನೈಜ ಭಾರತವನ್ನು ನೋಡಿದ್ದೇವೆ. ನಾವು ಅಲ್ಲಾಹ್‌ ಮೇಲೆ ನಂಬಿಕೆ ಇಟ್ಟಿದ್ದೇವೆ, ಯಾವುದೇ ಭಯ ನಮಗಿಲ್ಲ.‌ ನಾವು ಏಳೂ ಮಂದಿ ಈ ಹೋರಾಟದ ಬಳಿಕ ತಾಳ್ಮೆ ಕಲಿತಿದ್ದೇವೆ.‌ ನಾವು ನಮ್ಮ ಹಿಜಾಬ್ ಹಕ್ಕನ್ನು ಪಡೆದೇ ಪಡೆಯುತ್ತೇವೆ. ಅದನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ.‌‌ ನಮ್ಮ ಶಿಕ್ಷಣ ನಿಂತಿದೆ.‌ ಟಿಸಿ ಕೊಡಬೇಕಾದ್ರೂ ಹಿಜಾಬ್ ತೆಗೆಯಲು ಹೇಳ್ತಾರೆ. ಟಿಸಿ ಪಡೆಯಲು ಕೂಡ ನಾವು ತುಂಬಾ ಸಮಸ್ಯೆ ಪಟ್ಟಿದ್ದೇವೆ.‌ ನಾವು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯುತ್ತೇವೆ ಎಂದರು.

ಸಮಾವೇಶದಲ್ಲಿ ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಮಾತನಾಡಿ, ನಮ್ಮ ಮೆರವಣಿಗೆಯನ್ನು ಹತ್ತಿಕ್ಕಲು ಯತ್ನಿಸಿರುವ ಪೊಲೀಸರೇ, ನಿಮ್ಮ ಬ್ಯಾರಿಕೇಡ್, ಟಿಯರ್ ಗ್ಯಾಸ್, ಬುಲೆಟ್ ಎಲ್ಲಾ ಸಮುದ್ರಕ್ಕೆ ಎಸೆಯುವ ದಿನ ಶೀಘ್ರದಲ್ಲೇ ಬರಲಿದೆ. ಇವತ್ತು ನೀವು ನಮ್ಮನ್ನು ತಡೆದಿದ್ದೀರಿ. ಮುಂದೊಂದು ದಿನ ನಮಗೆ ಬರಲಿದೆ.‌ ಹಿಜಾಬ್ ವಿರುದ್ಧ ಹೈಕೋರ್ಟ್ ಅಸಂವಿಧಾನಿಕ ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋದಲ್ಲಿ ಅದೂ ಕೂಡ ತುರ್ತು ವಿಚಾರಣೆ ನಿರಾಕರಿಸಿದೆ.‌ ಈ ಬಗ್ಗೆಯೂ ನಮಗೆ ಅಸಮಾಧಾನವಿದೆ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

16/07/2022 08:56 pm

Cinque Terre

5.27 K

Cinque Terre

6