ಮಣಿಪಾಲ: ಇಲ್ಲಿಗೆ ಸಮೀಪದ ಪರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ರಸ್ತೆ ಹಾಳಾಗಿದೆ. ಕೆಳಪರ್ಕದ ಇಳಿಜಾರಿನಲ್ಲಿ ರಾತ್ರಿ ದಾಳಿಂಬೆ ತುಂಬಿದ ಟ್ರಕ್ ರಸ್ತೆ ಗುಂಡಿಯಲ್ಲಿ ನೃತ್ಯ ಮಾಡುತ್ತಾ ಸಾಗುವಾಗ ,ಟ್ರಕ್ ನಲ್ಲಿದ್ದ ಐದಾರು ಕ್ರೇಟ್ ದಾಳಿಂಬೆ ಹಣ್ಣು ರಸ್ತೆಗೆ ಚೆಲ್ಲಿದೆ!ಈ ವೇಳೆ ಸ್ಥಳೀಯರು ನಾಮುಂದು ತಾಮುಂದು ಎಂದು ರಸ್ತೆಯಲ್ಲಿ ಬಿದ್ದ ದಾಳಿಂಬೆ ಹಣ್ಣನ್ನು ಹೆಕ್ಕಿ ಕೊಂಡೊಯ್ದ ಪ್ರಸಂಗ ನಡೆಯಿತು. ಹೆಚ್ಚಿನ ಘನ ವಾಹನಗಳು ಇಲ್ಲಿ ಏರು ರಸ್ತೆಯಲ್ಲಿ ಸಾಗಲಾಗದೆ ದಿನನಿತ್ಯ ಅಪಘಾತ ಸಾಮಾನ್ಯ.ಮಾತ್ರವಲ್ಲ ,ಈ ರಸ್ತೆ ಮೂಲಕ ಸಾಗುವಾಗ ಚಾಲಕರು ಹಿಡಿಶಾಪ ಹಾಕುತ್ತಾ ಸಾಗುವಂತಾಗಿದೆ.
Kshetra Samachara
15/07/2022 10:13 pm