ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೇರಳದ ವಿದ್ಯಾರ್ಥಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ

ಮುಲ್ಕಿ: ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಶ್ಮೀರಕ್ಕೆ ಪಾದಯಾತ್ರೆ ಕೈಗೊಂಡಿದ್ದಾನೆ.

ಕೇರಳದ ಕ್ಯಾಲಿಕಟ್ ನಿಂದ ವಿದ್ಯಾರ್ಥಿ ಮಿನ್ ಹಾಜ್ ಪಟ್ಟೆರಿ ಕಳೆದ ಫೆ.8ನೇ ತಾರೀಖಿನಂದು ಪಾದಯಾತ್ರೆಯನ್ನ ಆರಂಭಿಸಿದ್ದಾನೆ.

ಪಾದಯಾತ್ರೆ ಕೈಗೊಂಡ ಯುವಕ ಮಿನ್ ಹಾಜ್ ಪಟ್ಟೆರಿ ಮುಲ್ಕಿಗೆ ಗುರುವಾರ ಬೆಳಿಗ್ಗೆ ಬಂದಿದ್ದು, ಸ್ಥಳೀಯ ಉಪಹಾರ ಮಂದಿರದಲ್ಲಿ ಉಪಹಾರ ಸೇವಿಸುತ್ತಿರುವಾಗ ಸಾಮಾಜಿಕ ಕಾರ್ಯಕರ್ತ ಧನಂಜಯ ಮಟ್ಟು ಹಾಗೂ ಮತ್ತಿತರರು ಈತನ ಸಾಹಸಯಾತ್ರೆ ಬಗ್ಗೆ ತಿಳಿದುಕೊಂಡು ಗುಡ್ ಲಕ್ ಹೇಳಿದ್ದಾರೆ.

ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಹಾಗೂ ನೂತನ ಸ್ಥಳಗಳ ಬಗ್ಗೆ ಮಾಹಿತಿಗಾಗಿ ಯಾತ್ರೆ ಕೈಗೊಂಡಿರುವುದಾಗಿ ಹೇಳಿರುವ ಆತ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮೂಲಕ ಶ್ರೀನಗರ ಪ್ರವೇಶಿಸುವುದಾಗಿ ಹೇಳಿದ್ದು ಕನಿಷ್ಠ ಮೂರು ತಿಂಗಳಲ್ಲಿ ನಡೆದುಕೊಂಡು ತಲುಪುವ ಯೋಜನೆ ಇದೆ ಎಂದಿದ್ದಾನೆ.

ಈ ಸಂದರ್ಭ ಮೂಡಾ ಸದಸ್ಯ ಜಯಾನಂದ ಚೇಳಾಯರು, ಸಾಮಾಜಿಕ ಕಾರ್ಯಕರ್ತರಾದ ಸಚಿನ್ ಮಟ್ಟು,ರಾಜೇಶ್ ಮತ್ತಿತರರು ಶುಭಾಶಯ ಹೇಳಿ ಬೀಳ್ಕೊಟ್ಟರು.

Edited By : PublicNext Desk
Kshetra Samachara

Kshetra Samachara

17/02/2022 07:22 pm

Cinque Terre

4.21 K

Cinque Terre

0