ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಉದ್ಯಮಿ ಧಾರ್ಮಿಕ- ಸಾಮಾಜಿಕ ಮುಖಂಡ ಸುರೇಶ್ ಪಡುಕೋಣೆ ನಿಧನ

ಬೈಂದೂರು :ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿ ಗ್ರಾಮದ ಪಡುಕೋಣೆ ಉದ್ಯಮಿ ಹಾಗೂ ಧಾರ್ಮಿಕ ಮುಖಂಡ ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸುರೇಶ್ ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಚಿಕ್ಕ ವಯಸ್ಸಿನಲ್ಲೇ ಬಾಂಬೆ ಸೇರಿದ ಸುರೇಶ್ ಪಡುಕೋಣೆ ಅವರು ವಿವಿಧ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿ ನಂತರ ಹೋಟೆಲ್ ಉದ್ಯಮಕ್ಕೂ ಕಾಲಿಟ್ಟರು. ಧಾರ್ಮಿಕ ಕ್ಷೇತ್ರದಲ್ಲಿ ಅತೀ ಆಸಕ್ತಿಯಿಂದ ತೊಡಗಿಸಿ ಕೊಂಡ ಸುರೇಶ್ ಪಡುಕೋಣೆಯವರು ಊರು ಹಾಗೂ ಹೊರಊರ ಧಾರ್ಮಿಕ ಕ್ಷೇತ್ರಗಳಿಗೆ ತನ್ನಲ್ಲಾದ ಅತಿ ಹೆಚ್ಚು ದೇಣಿಗೆ ನೀಡುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ,ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ,ಸಂತಾಪ ಸೂಚಿಸಿದ್ದು .ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ,ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ಹಲವು ಗಣ್ಯರು ಅಂತಿಮ ದರ್ಶನ ಮಾಡಿದರು .

Edited By : Nagaraj Tulugeri
Kshetra Samachara

Kshetra Samachara

13/02/2022 07:56 pm

Cinque Terre

4.12 K

Cinque Terre

1