ಉಡುಪಿ: ಕಾರ್ಯಕ್ರಮ ನಿಮಿತ್ತ ಉಡುಪಿಗೆ ಆಗಮಿಸಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿಯವರನ್ನು ನಿನ್ನೆ ಉಡುಪಿಯ ಸರ್ಕ್ಯುಟ್ ಹೌಸ್ ನಲ್ಲಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಪುರುಷ ಹಾಗೂ ಮಹಿಳಾ ವಕೀಲರ ಅನುಕೂಲಕ್ಕಾಗಿ ಎಲ್ಲ ಮೂಲಭೂತ ಸೌಕರ್ಯಗಳನ್ನೊಳಗೊಂಡ ವಕೀಲರ ಭವನವನ್ನು ಕಟ್ಟಿಸಿಕೊಡುವಂತೆ ಮತ್ತು ಖಾಲಿ ಇರುವ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಹುದ್ದೆಯನ್ನು ಭರ್ತಿ ಮಾಡುವಂತೆಯೂ ಮನವಿ ಸಲ್ಲಿಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯನ್ಯಾಯಮೂರ್ತಿಗಳು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಇದರೊಂದಿಗೆ ವಕೀಲರ ಭವನ ಆಗಬೇಕು ಎಂಬ 15 ವರ್ಷಗಳ ಕನಸು ಮತ್ತೆ ಗರಿಗೆದರಿದೆ. ನ್ಯಾಯಮೂರ್ತಿಗಳೇ ಭರವಸೆ ನೀಡಿರುವುದರಿಂದ ಶೀಘ್ರ ಈ ಕಾರ್ಯ ಆಗಲಿದೆ ಎಂಬ ವಿಶ್ವಾಸವನ್ನು ಹಿರಿಯ ವಕೀಲರು ವ್ಯಕ್ತಪಡಿಸಿದ್ದಾರೆ.
Kshetra Samachara
27/12/2021 05:00 pm