ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಮನೆ ಮದ್ದು ತಯಾರಿಕಾ ಶಿಬಿರ ಉದ್ಘಾಟನೆ

ಬಜಪೆ : ನಮ್ಮ ಮನೆಯ ಹಿತ್ತಲಲ್ಲೇ ಇರುವ ಗಿಡ, ಎಲೆ, ಬೇರು, ಸೊಪ್ಪುಗಳಿಂದ, ದಿನಬಳಕೆಯ ವಸ್ತುಗಳಿಂದ ಸಣ್ಣಪುಟ್ಟ ಕಾಯಿಲೆಗಳಿಗೆ, ಗಾಯ ನೋವುಗಳಿಗೆ ಮದ್ದನ್ನು ಮಾಡಬಹುದೆಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಖರ್ಚಿಲ್ಲದ ಔಷಧಿಯ ಬದಲಿಗೆ ಆಸ್ಪತ್ರೆಗೆ ಹೋಗಿ ದುಬಾರಿ ಖರ್ಚು ಮಾಡುವ ಈಗಿನ ಮಂದಿ ತಮ್ಮ ಆಹಾರ ಪದ್ಧತಿಯಲ್ಲಿ ದೈನಿಕ ನಡೆಯಲ್ಲಿ ಬದಲಾವಣೆ ತರುವ ಮೂಲಕ ಆರೋಗ್ಯವನ್ನು ಕಾಪಾಡಬಹುದು ಎಂದು ಆಯುರ್ವೇದ ವೈದ್ಯ, ರಾಷ್ಟ್ರೀಯ ತರಬೇತುದಾರ ಮೈಸೂರಿನ ಡಾ. ಟಿ.ಎನ್. ಮಂಜುನಾಥ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಸರೆಯಲ್ಲಿ ಎಕ್ಕಾರು ವಿಜಯ ಯುವ ಸಂಗಮದ ಸಹಯೋಗದಲ್ಲಿ ಕಟೀಲಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಮನೆ ಮದ್ದು ತಯಾರಿಕಾ ಶಿಬಿರದಲ್ಲಿ ಮಾತನಾಡಿದರು.

ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಯುರ್ವೇದ ಗಿಡಗಳನ್ನು ನೆಟ್ಟು, ಶಿಬಿರ ಉದ್ಘಾಟಿಸಿದರು.

ಈ ಸಂದರ್ಭ ಅಡ್ಡೂರು ಕೃಷ್ಣ ರಾವ್, ಕೊಡೆತ್ತೂರುಗುತ್ತು ಬಿಪಿನ್ ಪ್ರಸಾದ್ ಶೆಟ್ಟಿ, ಕಿನ್ನಿಗೋಳಿಯ ಉದ್ಯಮಿ ಜಯಕುಮಾರ ಮಯ್ಯ, ವಿಜಯ ಯುವ ಸಂಗಮದ ಉಪಾಧ್ಯಕ್ಷ ವಿಕ್ರಂ ಮಾಡ ಮತ್ತಿತರರಿದ್ದರು. ಎಕ್ಕಾರು ಹೇಮಲತಾ ಶರ್ಮ ನಿರೂಪಿಸಿದರು.

ವಿಜಯಪುರ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಜಿಲ್ಲೆಯ ನಾನಾಕಡೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶನಿವಾರ ಸಮಾರೋಪ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

25/11/2021 09:10 pm

Cinque Terre

17.52 K

Cinque Terre

2