ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ : ಬಲಿಷ್ಟ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹತ್ತರ: ಫಾ. ಮ್ಯಾಥ್ಯೂ ವಾಸ್

ಮುಲ್ಕಿ:ವೈಸಿಎಸ್ ಕಿನ್ನಿಗೋಳಿ ವಲಯದ ವತಿಯಿಂದ ವಲಯದ ಎಲ್ಲಾ ಕಥೊಲಿಕ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಕಿನ್ನಿಗೋಳಿ ಚರ್ಚ್ ಧರ್ಮಗುರುಗಳಾದ ಫಾ. ಮ್ಯಾಥ್ಯೂ ವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೈಸಿಎಸ್ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ. ಫಾ. ರೂಪೇಶ್ ಮಾಡ್ತಾರವರು ಕಳೆದ 5 ವರ್ಷಗಳಿಂದ ವೈಸಿಎಸ್ ಸಂಘಟನೆಗಾಗಿ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು.

ಕಿರೆಂ ಚರ್ಚ್ ಧರ್ಮಗುರುಗಳಾದ ಓಜ್ವಲ್ಡ್ ಮೊಂತೆರೊ, ವೈಸಿಎಸ್ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ರೂಪೇಶ್ ಮಾಡ್ತಾ, ವೈಸಿಎಸ್ ಕಿನ್ನಿಗೋಳಿ ವಲಯ ನಿರ್ದೇಶಕರಾದ ಲ್ಯಾನ್ಸಿ ಸಲ್ಡಾನ್ಹ, ವೈಸಿಎಸ್ ಕಿನ್ನಿಗೋಳಿ ವಲಯ ಸಚೇತಕಿಯರಾದ ಈಡಲ್ ಸಲ್ಡಾನ್ಹ ಹಾಗೂ ಮೆಲ್ರೀಡ ಜೇನ್ ರೊಡ್ರಿಗಸ್, ವೈಸಿಎಸ್ ಮಂಗಳೂರು ಕೇಂದ್ರೀಯ ಕಾರ್ಯದರ್ಶಿ ಮೆಲಿಸಾ ಮೊಂತೆರೊ, ವೈಸಿಎಸ್ ಕಿನ್ನಿಗೋಳಿ ವಲಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ವೈಸಿಎಸ್ ಅಧ್ಯಕ್ಷರಾದ ಡೆರಿಲ್ ಡೆಸಾ, ವೈಸಿಎಸ್ ಪ್ರಾಂತೀಯ ನಿರ್ದೇಶಕರಾದ ವಂ. ಫಾ. ಲೂರ್ದ್ ರಾಜ್ ಹಾಗೂ ವೈಸಿಎಸ್ ಮಂಗಳೂರು ಧರ್ಮಪ್ರಾಂತ್ಯದ ಸಂಯೋಜಕರಾದ ಪ್ರಜ್ವಲ್ ಸಿಕ್ವೇರಾರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಕಿನ್ನಿಗೋಳಿ, ಕಿರೆಂ, ಬಳಕುಂಜೆ, ಪಕ್ಷಿಕೆರೆ, ಕಟೀಲು, ನಿಡ್ಡೋಡಿ ಹಾಗೂ ನೀರುಡೆ ಘಟಕಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದರು.

ವೈಸಿಎಸ್ ಕಿನ್ನಿಗೋಳಿ ವಲಯ ಅಧ್ಯಕ್ಷರಾದ ನೆಲಿಶ್ಯಾ ಲೋಬೊ ಸ್ವಾಗತಿಸಿದರು. ಕಾರ್ಯದರ್ಶಿ ಲೋಯ್ಡ್ ಡಿಸೋಜ ವಂದಿಸಿದರು. ರಿಯಾ ಮಿನೇಜಸ್ ಹಾಗೂ ನೇಹಾ ಸೆರಾವೊ ಕಾರ್ಯಕ್ರಮವನ್ನು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

16/10/2021 10:03 pm

Cinque Terre

5.84 K

Cinque Terre

0