ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕೂಲಿ ಕೆಲಸದ ದಿನಗಳ ನೆನಪು ಬಿಚ್ಚಿಟ್ಟ ರವಿ ಡಿ. ಚನ್ನಣ್ಣವರ್

ಮಂಗಳೂರು: ಕರ್ನಾಟಕದ ದಕ್ಷ, ಪ್ರಾಮಾಣಿಕ ಮತ್ತು ನಿಸ್ವಾರ್ಥ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ ಡಿ ಚನ್ನಣ್ಣನವರ್ ಕಡಬ ತಾಲೂಕಿನ ನೆಟ್ಟಣ ಪೇಟೆಯಲ್ಲಿ ಕಾಣಸಿಕ್ಕಿದ್ದಾರೆ.

ರವಿ ಡಿ ಚನ್ನಣ್ಣನವರ್ ಅವರು ತಮ್ಮ ಸ್ನೇಹಿತರ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಬಂದಿದ್ದರು. ಈ ವೇಳೆ ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಸಂಚರಿಸುವ ದಾರಿ ಮಧ್ಯೆ ನೆಟ್ಟಣ ಎಂಬಲ್ಲಿಗೆ ಬರುವಾಗ ತಮ್ಮ ವಾಹನ ನಿಲ್ಲಿಸಿ ಕೆಳಗಿಳಿದು ಇಲ್ಲಿರುವ ಪ್ರಕಾಶ್ ಎಂಬವರ ಹೋಟೆಲಿಗೆ ಭೇಟಿಕೊಟ್ಟು ಮಾತುಕತೆ ನಡೆಸಿದ್ದಾರೆ.

ಈ ಜಾಗ ನೋಡಿ ಇಲ್ಲಿ ಇಳಿಯೋದಕ್ಕೂ ಒಂದು ಕಾರಣವಿತ್ತು. ಸುಮಾರು ಮೂವತ್ತು ವರ್ಷ ಹಿಂದೆ ನೆಟ್ಟಣಕ್ಕೆ ಸಮೀಪದ ಮೇರುಂಜಿ ಎಂಬಲ್ಲಿ ತೋಟವೊಂದರಲ್ಲಿ ರವಿ ಡಿ ಚೆನ್ನಣವರ್ ಅವರು ಕೂಲಿ ಕೆಲಸ ಮಾಡುವ ಸಲುವಾಗಿ ಕುಟುಂಬದ ಸದಸ್ಯರ ಜೊತೆಗೆ ಬಂದಿದ್ದರಂತೆ. ಅಂದು ಅವರು ಇಲ್ಲಿ ಕೆಲಸಕ್ಕೆ ಬರುವಾಗ ಇದ್ದ ರೈಲ್ವೆ ಸೇತುವೆಯೊಂದು ಇಂದಿಗೂ ಅದೇ ತರಹ ಇರುವುದು ಮತ್ತು ನೆಟ್ಟಣ ಎಂಬ ಈ ಪುಟ್ಟ ಗ್ರಾಮ ದೊಡ್ಡ ಬದಲಾವಣೆಗಳು ಇಲ್ಲದೇ ಅದೇ ತರಹ ಇರುವುದು ಈ ಪ್ರದೇಶವನ್ನು ಗುರುತಿಸಲು ಸಾಧ್ಯವಾಯಿತು ಎಂದು ತಮ್ಮ ಇಲ್ಲಿನ ಕೆಲಸ ಮಾಡಿದ ದಿನಗಳ ಅನುಭವವನ್ನು ತಮ್ಮ ಜೊತೆಗೆ ಬಂದ ಗೆಳೆಯರಲ್ಲಿ ಮತ್ತು ಹೋಟೆಲ್ ಮಾಲೀಕ ಪ್ರಕಾಶ್ ಅವರಲ್ಲಿ ಹಂಚಿಕೊಂಡು ಮುಂದೊಂದು ದಿನ ಇಲ್ಲಿಗೆ ಭೇಟಿ ನೀಡುವುದಾಗಿ ಹೇಳಿ ಚಹಾ ಕುಡಿದು ತೆರಳಿದರು.

Edited By : Vijay Kumar
Kshetra Samachara

Kshetra Samachara

27/09/2021 11:11 pm

Cinque Terre

18.26 K

Cinque Terre

0