ಉಡುಪಿ: ಉಡುಪಿಯಲ್ಲಿ ಸ್ವಿಗ್ಗಿ ಕಂಪನಿ ಸಿಬ್ಬಂದಿ ಪ್ರತಿಭಟನೆ ನಡೆಯುತ್ತಿದೆ. ಉಡುಪಿಯ ಇಂದ್ರಾಳಿ ಕಚೇರಿ ಬಳಿ ಜಮಾಯಿಸಿದ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗಳಿದಿದ್ದಾರೆ.
ಉಡುಪಿ ನಗರದ ಸ್ವಿಗ್ಗಿ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಆರೋಪಿಸಿರುವ ಸಿಬ್ಬಂದಿ 13 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೆಲಸವಿಲ್ಲದೆ ಐವತ್ತಕ್ಕೂ ಹೆಚ್ಚು ಉದ್ಯೋಗಿಗಳು ಪರದಾಡುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಿದ್ದಾರೆ.
Kshetra Samachara
13/09/2021 04:07 pm