ಉಡುಪಿ: ಪಡಿತರ ಚೀಟಿ ನವೀಕರಣಕ್ಕೆ ಬೆರಳಚ್ಚು ಪಡೆಯುವ ಸಲುವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಾದ್ಯಂತ ವಾಸಿಸುತ್ತಿರುವ ಉತ್ತರ ಕರ್ನಾಟಕದ ಕಾರ್ಮಿಕರಿಗೆ ಪ್ರತಿಯೊಬ್ಬರಿಗೂ ಅವರವರ ಊರುಗಳಿಂದ ಕರೆ ಬರುತ್ತಿದ್ದು ಬೆರಳಚ್ಚು ನೀಡಲು ತಮ್ಮ ತಮ್ಮ ಊರುಗಳಿಗೆ ಹೋಗಿ ಬರಲು ತುಂಬಾ ತೊಂದರೆಯಾಗುತ್ತಿದೆ.
ಈ ವಿಷಯವನ್ನು ಮನಗಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇವರು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ರವರಿಗೆ ಮನವಿ ಸಲ್ಲಿಸಿ ಕಾರ್ಮಿಕರಿಗೆ ಆಗುತ್ತಿರುವ ಸಂಕಷ್ಟಗಳನ್ನು ನಿವಾರಿಸುವಂತೆ ಕೋರಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ಮತ್ತು ದ.ಕ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಬಸವರಾಜ್ ಐಹೊಳೆ, ಕುಮಾರ್ ಪ್ರಸಾದ್, ಸಿದ್ದಪ್ಪ ಪೂಜಾರಿ, ಮಹೇಶ್ ಗುಂಡಿ ಬೈಲು ಹಾಗು ಮಹಿಳಾ ಬಳಗದ ಸವಿತಾ ನೋಟಗಾರ ಉಪಸ್ಥಿತರಿದ್ದರು.
Kshetra Samachara
11/09/2021 12:20 pm