ಮುಲ್ಕಿ: ಇತಿಹಾಸಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಉದ್ಯಮಿ ಹರೇಕಲ ಪಾವೂರ್ ಕಡಿಂಜ ನಿವಾಸಿ ಸತ್ಯಪಾಲ ರೈ(55) ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು.
ಅವರು ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಅವರು ಕಳೆದ ಏಳು ವರ್ಷದಿಂದ ಬಪ್ಪನಾಡು ಯಕ್ಷಗಾನ ಮೇಳದ ಸಂಚಾಲಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಕೊಡುಗೈ ದಾನಿ, ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು,ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯಚಂದ್ರ ಜೈನ್, ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ವಿನೋದ್ ಕುಮಾರ್, ಮ್ಯಾನೇಜರ್ ಭವಾನಿ ಶಂಕರ ಶೆಟ್ಟಿ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ
Kshetra Samachara
26/08/2021 08:36 pm