ಮುಲ್ಕಿ: ಕಟೀಲು ನಂದಿನಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಶ್ರೇಯೋಭಿವೃದ್ಧಿಗಾಗಿ ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ಭಾನುವಾರ ವಾಯುಸ್ತುತಿ ಪುನಶ್ಚರಣೆ ಹೋಮ ನಡೆಯಿತು.
ಪುರೋಹಿತರಾದ ರಾಮಚಂದ್ರ ಉಪಾಧ್ಯಾಯರಿಗೆ ಗುರುವಂದನೆ ಮಾಡಲಾಯಿತು. ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ. ಸದಾಶಿವ ಉಡುಪ, ನಂದಿನಿ ಸಭಾದ ಪದ್ಮನಾಭ ಭಟ್, ಅನಂತಪದ್ಮನಾಭ ಆಚಾರ್ಯ, ವೇದವ್ಯಾಸ ಉಡುಪ, ರಾಘವೇಂದ್ರ ಭಟ್, ಲಕ್ಷ್ಮೀಪ್ರಸಾದ ಉಡುಪ, ವೆಂಕಟೇಶ ಉಡುಪ, ಸುಬ್ರಹ್ಮಣ್ಯ ಶಿಬರಾಯ ಮತ್ತಿತರರಿದ್ದರು.
Kshetra Samachara
01/08/2021 08:57 pm