ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೊಕ್ಕೊಟ್ಟು: ಕ್ರೇನ್‌ಗೆ ತಗುಲಿದ ವಿದ್ಯುತ್- ಚಾಲಕ, ನರ್ಸಿಂಗ್‌ ವಿದ್ಯಾರ್ಥಿನಿ ಗ್ರೇಟ್‌ ಎಸ್ಕೇಪ್!

ತೊಕ್ಕೊಟ್ಟು: ಕ್ರೇನ್‌ಗೆ ವಿದ್ಯುತ್ ತಗುಲಿ ಚಾಲಕ ಹಾಗೂ ನರ್ಸಿಂಗ್‌ ವಿದ್ಯಾರ್ಥಿನಿ ಗ್ರೇಟ್‌ ಎಸ್ಕೇಪ್ ಆದ ಘಟನೆ ಕುತ್ತಾರು ಜಂಕ್ಷನ್‌ನಲ್ಲಿ ಶುಕ್ರವಾರ ನಡೆದಿದೆ.

ಕುತ್ತಾರು ಜಂಕ್ಷನ್‌ನಲ್ಲಿ ಕ್ರೇನ್ ಮೂಲಕ ರಸ್ತೆ ಅಗಲೀಕರಣ ಮಾಡಲಾಗುತ್ತಿತ್ತು. ಈ ವೇಳೆ ವಿದ್ಯುತ್‌ ತಂತಿಗೆ ಕ್ರೇನ್ ತಗುಲಿದ್ದು ಪರಿಣಾಮ ವಯರ್ ರಸ್ತೆಗೆ ಬಿದ್ದಿದೆ. ಕ್ರೇನ್ ಚಾಲಕ ತಕ್ಷಣವೇ ಕ್ರೇನ್‌ನಿಂದ ಹಾರಿ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಅದೇ ಸಮಯಕ್ಕೆ ಇದೇ ಮಾರ್ಗವಾಗಿ ಬರುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿನಿ ರಸ್ತೆಗೆ ಬಿದ್ದ ತಂತಿಯಿಂದ ಸೆಕೆಂಡುಗಳ ಅಂತರದಲ್ಲಿ ಪಾರಾಗುವ ಮೂಲಕ ಮಹಾ ದುರಂತವೊಂದು ತಪ್ಪಿದೆ.

Edited By : Vijay Kumar
Kshetra Samachara

Kshetra Samachara

30/01/2021 09:21 am

Cinque Terre

15.2 K

Cinque Terre

1