ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:ಸ್ಕೂಟರ್ ಗೆ ಡಿಕ್ಕಿ ಹೊಡೆದ ಆಟೋ,ಸವಾರನಿಗೆ ಗಾಯ

ಬಜಪೆ:ಅಟೋ ರಿಕ್ಷಾವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೊಬ್ಬರು ಗಾಯಗೊಂಡ ಘಟನೆ ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರು ಬಳಿ ಇಂದು ಸಂಜೆ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಸ್ಕೂಟರ್ ಸವಾರರನ್ನು ಕಿನ್ನಿಗೋಳಿಯ ಏಳಿಂಜೆ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದ್ದು,ಸ್ಕೂಟರ್ ನಜ್ಜುಗುಜ್ಜಾಗಿದೆ.ಆಟೋ ರಿಕ್ಷಾವು ಕಟೀಲು ಕಡೆಯಿಂದ ಎಕ್ಕಾರು ಕಡೆಗೆ ಸಂಚರಿಸುತ್ತಿತ್ತು.ಹಾಗೂ ಸ್ಕೂಟರ್ ಎಕ್ಕಾರಿನಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿತ್ತು. ಗಾಯಗೊಂಡ ಸ್ಕೂಟರ್ ಸವಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

24/08/2022 06:42 pm

Cinque Terre

782

Cinque Terre

0

ಸಂಬಂಧಿತ ಸುದ್ದಿ