ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಚ್ಚನಾಡಿ:ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಪಚ್ಚನಾಡಿ : 2 ಕೋಟಿ 10 ಲಕ್ಷ ರೂಪಾಯಿಗೂ ಮಿಕ್ಕಿದ ಅನುದಾನದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 19 ನೇ ಪಚ್ಚನಾಡಿ ವಾರ್ಡಿನ ಮೇರಿಹಿಲ್ ಜಂಕ್ಷನ್ ಅಭಿವೃದ್ಧಿ,ಪದವಿನಂಗಡಿ ಪರಿಸರದ ಸ್ವರ್ಣಗಿರಿ ಲೇಔಟ್ ಹಾಗೂ SBI ಕಾಲೋನಿ ಬಳಿ ಉದ್ಯಾನವನ ನಿರ್ಮಾಣ, ಹೃದಯಭಾಗವಾದ ದೇವಿನಗರ ಪದವಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ 25 ನೇ ರಜತ ಮಹೋತ್ಸವ ಅಂಗವಾಗಿ ಬಯಲು ರಂಗ ಮಂದಿರ ಮುಂಭಾಗ ಮೈದಾನಕ್ಕೆ ಇಂಟರ್ ಲಾಕ್, ಅದೇ ಪರಿಸರದಲ್ಲಿ ಆಟೋ ರಿಕ್ಷಾ ಪಾರ್ಕ್ ನಿರ್ಮಾಣ ಹಾಗೂ ಮೇಲ್ಛಾವಣಿ ಅಳವಡಿಕೆಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಮಂಗಳವಾರ ಚಾಲನೆ ನೀಡಿದರು.

ಉಪಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಗಳಾದ ಸಂಗೀತಾ ಆರ್ ನಾಯಕ್, ಜಯನಂದ್ ಅಂಚನ್, ಭಾಜಪಾ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಜಿಲ್ಲಾ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ರಾಮ ಮುಗ್ರೊಡಿ, ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್ ಮತ್ತು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/08/2022 05:21 pm

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ