ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್-ನಿಗ್ಮ-2022’ ರಾಜ್ಯ ಮಟ್ಟದ ಫೆಸ್ಟ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಮೆಮೊರಿಯಲ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ `ಎಲ್ ಡೊರಾಡೊ ಎನ್-ನಿಗ್ಮ-2022’ನಲ್ಲಿ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಹ್ಯೂಮನ್ ರಿಸೋರ್ಸ್ ನಲ್ಲಿ ವಿಕ್ರಮ್ ಪ್ರಥಮ, ರಸಪ್ರಶ್ನೆಯಲ್ಲಿ ಮೊಹಮ್ಮದ್ ಆಝೀಬ್ ಹಾಗೂ ಮೊಹಮ್ಮದ್ ಮುಝಾಮಿಲ್ ದ್ವಿತೀಯ, ಸೈಬರ್ ಕ್ವೆಸ್ ನಲ್ಲಿ ತುಷಾರ್ ಪ್ರಥಮ, ಸಮೂಹ ಗಾಯನದಲ್ಲಿ ಸತ್ಯಜಿತ್ ಹಾಗೂ ತಂಡ ಪ್ರಥಮ, ಗಾಯನದಲ್ಲಿ ಗ್ರೀಷ್ಮಾ ಪ್ರಥಮ, ರೋಡಿಸ್ ನಲ್ಲಿ ನಟರಾಜ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ. ಕುರಿಯನ್ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/07/2022 06:30 pm

Cinque Terre

14.1 K

Cinque Terre

0

ಸಂಬಂಧಿತ ಸುದ್ದಿ