ಬ್ರಹ್ಮಾವರ: ಬ್ರಹ್ಮಾವರ ಪ್ರದೇಶ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ಬೇಡಿಕೆಗಳಿಗಾಗಿ ತಹಶಿಲ್ದಾರರ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಮಂಡಳಿಯನ್ನು ರದ್ದುಗೊಳಿಸಬಾರದು, ಸ್ಕಾಲರ್ಶಿಪ್ ಅರ್ಜಿಗಳನ್ನು ಕೂಡಲೇ ಸ್ವೀಕರಿಸಬೇಕು, ಬಾಕಿ ಇರುವ ಸವಲತ್ತುಗಳನ್ನು ಕೂಡಲೇ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಒತ್ತಾಯಿಸಿ ಪ್ರಧಾನ ಮಂತ್ರಿ ಮತ್ತು ರಾಜ್ಯ ಕಲ್ಯಾಣ ಮಂಡಳಿ ಕಾರ್ಯದರ್ಶಿ ಯವರಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ, ಉಪಾಧ್ಯಕ್ಷರಾದ ಸುಬಾಸ್ ನಾಯಕ್, ಶಶಿಧರ ಗೊಲ್ಲ, ರಾಮ ಕಾರ್ಕಡ, ಉದಯ ಪೂಜಾರಿ, ಚಂದ್ರ ನಾಯಕ್, ಮುಖಂಡರಾದ ಶ್ರೀನಿವಾಸ ಶೆಟ್ಟಿಗಾರ್, ಶ್ರೀಧರ ಶೆಟ್ಟಿ, ಮುರಳಿ, ವಿಜಯ ನಾಯಿರಿ, ಗೋಪಾಲ ನಾಯಕ್ ಮೊದಲಾದವರು ಬಾಗವಹಿಸಿದ್ದರು.
Kshetra Samachara
03/12/2021 12:37 pm