ಮಂಗಳೂರು : ಕುವೈಟ್ ಮರಳಿ ತಾಯ್ನಾಡಿಗೆ ಬರುವ ವೇಳೆ ಕುವೈಟ್ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಸಿಲುಕಿದ್ದ ಉಡುಪಿಯ ಶಿರ್ವ ಮಂಚಕಲ್ ಗಿರಿಜಾ (63) ಎಂಬಾಕೆಯನ್ನ ಶೀಘ್ರದಲ್ಲೇ ಕುವೈಟ್ ನಿಂದ ತಾಯ್ನಾಡಿಗೆ ಕಳುಹಿಸಲು ಸಜ್ಜಾಗಿದೆ.
ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆರೋಗ್ಯದಲ್ಲಿ ಏರುಪೇರು ಮತ್ತು ಕೆಲಸದಲ್ಲಿ ಆದ ತೊಂದರೆಯ ಕಾರಣ ಊರಿಗೆ ಬರಲು ನಿರ್ಧಾರ ಮಾಡಿ ಸೆ.13ರಂದು ಕುವೈಟ್ ವಿಮಾನ ನಿಲ್ದಾಣಕ್ಕೆ ಬಂದ ಇಮಿಗ್ರೇಷನ್ ಅಧಿಕಾರಿಗಳ ತಪಾಸಣೆ ವೇಳೆ ಕುವೈಟ್ ಸಿಐಡಿ ಪೊಲೀಸರು ವಶದಲ್ಲಿದ್ದರು ಈ ಬಗ್ಗೆ ಗಿರಿಜಾ ಅವರ ಪುತ್ರಿಗೆ ಸುದ್ದಿ ತಿಳಿದ ನಂತರ ಸಂಪರ್ಕ ಕಡಿತಗೊಂಡಿತ್ತು.
ತಾಯಿ ಕುವೈಟ್ ನಲ್ಲಿ ಕಷ್ಟಕ್ಕೆ ಸಿಲುಕಿದ ಸುದ್ದಿ ಮಗಳಿಗೆ ತಿಳಿಯುತ್ತಿದ್ದಂತೆ ಭಯವಾಗಿ ತಾಯಿಯನ್ನು ಊರಿಗೆ ಕಳುಹಿಸಲು ಅನಿವಾಸಿ ಭಾರತೀಯ ಸಂಘಟನೆಗಳು ಸಹಕರಿಸಿ ಎಂದು ಅವರ ಪುತ್ರಿ ಸೋಷಿಯಲ್ ಮೀಡಿಯಾ ಆಡಿಯೋ ಮನವಿಗೆ ಸ್ಪಂದಿಸಿ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಕರ್ನಾಟಕ ಘಟಕ ಅಬ್ದುಲ್ ಲತೀಫ್ ಶೆಡ್ಡೆ ಮತ್ತು ಮೋಹನದಾಸ ಕಾಮತ್ ಮಂಜೇಶ್ವರ ಅವರು ಕುವೈಟ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಸುದ್ದಿ ತಿಳಿದಿತ್ತು.
ಈ ಸಮಸ್ಯೆ ಬಗ್ಗೆ ಭಾರತೀಯ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಭಾರತೀಯ ರಾಯಭಾರಿ ಕಚೇರಿ ಜತೆ ಮಾತುಕತೆ ನಡೆಸಿ ಸಮಸ್ಯೆ ತಿಳಿಸಿದಾಗ ಭಾರತೀಯ ರಾಯಭಾರಿ ಕಚೇರಿ ಸ್ಪಂದಿಸಿ ಬಿಡುಗಡೆಯ ಎಲ್ಲ ವ್ಯವಸ್ಥೆಗಳನ್ನು ಕೈಗೊಂಡಿದ್ದು ಸೆ.20ರಂದು ಬಹುತೇಕ ಎಲ್ಲ ತಾಂತ್ರಿಕ ತೊಂದರೆ ಮುಕ್ತಾಯವಾಗಿದ್ದು ಸೆ.23ರಂದು ಬೆಳಗ್ಗೆ ಕುವೈಟ್ ನಿಂದ ತಾಯ್ನಾಡಿಗೆ ಮರಳಲಿದ್ದಾರೆ.
Kshetra Samachara
18/09/2020 02:14 pm