ಕಾರ್ಕಳ: ಪಶ್ವಿಮಘಟ್ಟ ತಪ್ಪಲು ತೀರಾ ಪ್ರದೇಶವಾಗಿರುವ ಕಾರ್ಕಳ ತಾಲೂಕಿನ ಮಾಳ ಕೊಡ್ಸರಬೆಟ್ಟು ಎಂಬಲ್ಲಿ ಹಿತ್ತಲಿನಲ್ಲಿ ಕಾಣ ಸಿಕ್ಕಿದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಉರಗಪ್ರೇಮಿ ಅನಿಲ್ ಪ್ರಭು ಅವರಿಗೆ ಬಂದ ಕರೆ ಅನ್ವಯ ಘಟನಾ ಸ್ಥಳಕ್ಕೆ ತೆರಳಿದ್ದರು.
ಹಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ಒಂದು ಕಿ.ಮೀ ದೂರದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿತು. ಚಾಕಚಾಕ್ಯತೆಯಿಂದ ಸೆರೆಹಿಡಿದ ಕಾಳಿಂಗ ಸರ್ಪವನ್ನು ಕುದುರೆಮುಖ ರಾಷ್ಟ್ರೀಯ ಅರಣ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
Kshetra Samachara
03/10/2022 08:24 pm