ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಆರಂಭದಲ್ಲೇ ಪ್ರಕೃತಿ ಮುನಿಸು: ಮೀನುಗಾರಿಕೆಗೆ ಕೋಟ್ಯಂತರ ರೂ ನಷ್ಟ.!

ಮಲ್ಪೆ: ಕೆಲವು ದಿನಗಳಿಂದ ನಿರಂತರ ಸುರಿದ ಗಾಳಿ ಮಳೆಯಿಂದಾಗಿ ಸಮುದ್ರವು ಪ್ರಕ್ಷುಬ್ಧಗೊಂಡಿದೆ. ಇದರ ಪರಿಣಾಮವಾಗಿ ಬಹುತೇಕ ಬೋಟ್‌ಗಳು ಮೀನುಗಾರಿಕೆಯನ್ನು ನಡೆಸಲಾಗದೆ ದಡದತ್ತ ಬಂದಿದ್ದು ಇನ್ನಷ್ಟೆ ಹೊರಡಬೇಕಿದೆ.

ಕೇವಲ ತಿಂಗಳ ಹಿಂದೆಯಷ್ಟೆ ಈ ವರ್ಷದ ಮೀನುಗಾರಿಕೆ ಋತು ಆರಂಭವಾಗಿ ಭರ್ಜರಿ ಮೀನುಗಾರಿಕೆಯ ನಿರೀಕ್ಷೆಯಲ್ಲಿ ಮೀನುಗಾರರಿದ್ದರು. ನಿರೀಕ್ಷೆಯಂತೆ ಮೀನುಗಾರಿಕೆ ನಡೆಯುತ್ತಿತ್ತು ಕೂಡ. ಆದರೆ ಮತ್ತೆ ಪ್ರಾಕೃತಿಕ ವೈಪರೀತ್ಯ ಉಂಟಾಗಿದ್ದು ಮೀನುಗಾರರಿಗೆ ತಡೆಯಾಗಿದೆ. ಕೊಂಚ ಆದಾಯ ಗಳಿಸುವಷ್ಟರಲ್ಲೇ ಪ್ರಕ್ಷುಬ್ಧ ವಾತಾವರಣದಿಂದಾಗಿ ಮೀನುಗಾರಿಕೆ ನಡೆಸದಂತಾಗಿದೆ. ಇದರಿಂದಾಗಿ ನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ. ಮಲ್ಪೆ ಬಂದರಿನಲ್ಲಿ ಶೇಕಡ ಐವತ್ತಕ್ಕೂ ಹೆಚ್ಚು ಬೋಟ್ ಗಳು ಲಂಗರು ಹಾಕಿವೆ. ಕೆಲವು ಬೋಟುಗಳು ಕಾರವಾರ ಬಂದರು ಸೇರಿದಂತೆ ಸಮೀಪದ ಬಂದರನ್ನು ಆಶ್ರಯಿಸಿವೆ. ನೀರಿನ ಒತ್ತಡ ಜಾಸ್ತಿ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

12/09/2022 06:31 pm

Cinque Terre

17.89 K

Cinque Terre

0