ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿದ್ದು, ಅಡಿಕೆ ತೋಟ, ಜೇನು ಕೃಷಿ, ಒಂದು ಸ್ಕೂಟರ್ ಧ್ವಂಸ ಮಾಡಿದೆ.
ಲಕ್ಷ್ಮಣ ಪೆತ್ತಲಾ, ಸುಂದರ ಬಲ್ಲೆರಿ ಎಂಬುವರ ಸುಮಾರು 25ಕ್ಕೂ ಹೆಚ್ಚು ಅಡಿಕೆ ಗಿಡಗಳು, ಜಯಪ್ರಕಾಶ್ ಪೆತ್ತಲ ಎಂಬವರ ಜೇನುನೊಣ ಸಹಿತ 14 ಜೇನುಪೆಟ್ಟಿಗೆಗಳು, ಕಿಶೋರ್ ಪಾದೆ ಎಂಬವರ ಸ್ಕೂಟರನ್ನೂ ಕಾಡಾನೆ ದ್ವಂಸ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
29/07/2022 10:09 pm