ಉಡುಪಿ: ಜಿಲ್ಲೆಯಾದ್ಯಂತ ಇವತ್ತು ವರುಣನ ಆರ್ಭಟ ತಣ್ಣಗಾಗಿದೆ.ಇವತ್ತು ಬೆಳಿಗ್ಗಿನಿಂದಲೇ ಬಿಸಿಲಿನ ವಾತಾವರಣ ಇದೆ.ಆದರೆ ಕಳೆಷೆರಡು ದಿನ ಸುರಿದ ಮಳೆಗೆ ಜಿಲ್ಲೆಯ ಒಟ್ಟು 39 ಮನೆಗಳಿಗೆ ಹಾನಿಯಾಗಿ ಸುಮಾರು 10 ಲಕ್ಷ ರೂ. ನಷ್ಟ ಉಂಟಾಗಿದೆ.
ಕಾಪು ತಾಲೂಕಿನ ಎಲ್ಲೂರು ಪ್ರಭಾಕರ ಆಚಾರ್ಯ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದು 2,೦೦,೦೦೦ರೂ. ಮತ್ತು ಬೈಂದೂರು ತಾಲೂಕಿನ ಯಡ್ತರೆಯ ನರಸಿಂಹ ಎಂಬವವರ ಮನೆ ಸಂಪೂರ್ಣ ಹಾನಿಯಾಗಿ ಒಂದು ಲಕ್ಷ ರೂ. ನಷ್ಟವಾಗಿದೆ.
ಬ್ರಹ್ಮಾವರ ತಾಲೂಕಿನ ಶಿರಿಯಾಳ, ತೋಟತಟ್ಟು ಪಡುಕೆರೆಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು 50ಸಾವಿರ ರೂ., ಕಾಪು ತಾಲೂಕಿನ ಪಾದೆ ಬೆಟ್ಟು, ಮಲ್ಲಾರು, ಊಳಿಯಾರಗೋಳಿಯಲ್ಲಿ ಮೂರು ಮನೆಗಳಿಗೆ ಹಾನಿ ಯಾಗಿ ಒಟ್ಟು 90ಸಾವಿರ ರೂ., ಬೈಂದೂರು ತಾಲೂಕಿನ ನಾವುಂದದಲ್ಲಿ ಒಂದು ಮನೆಗೆ 15,೦೦೦ ರೂ. ಹಾಗೂ ಹೇರೂರು, ಯಳಜಿತ್ ಎಂಬಲ್ಲಿ ಮೂರು ಮನೆಯ ದನದ ಕೊಟ್ಟಿಗೆ ಸಂಪೂರ್ಣ ಹಾನಿ ಒಟ್ಟು 35ಸಾವಿರ ರೂ. ನಷ್ಟ ಉಂಟಾಗಿದೆ.
ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಒಂದು ಮನೆಗೆ ಹಾನಿಯಾಗಿ 50,೦೦೦ರೂ. ಕುಂದಾಪುರ ತಾಲೂಕಿನ ಕಾವಾಡಿ, ಜಪ್ತಿ, ಬನ್ನೂರು, ಹೊಸಾಡು, ಉಳ್ಳೂರು, ಹಕ್ಲಾಡಿ, ಚಿತ್ತೂರು, ವಕ್ವಾಡಿ, ಕೋಟೇಶ್ವರ, ಕುಂಭಾಶಿ, ಅಮಾಸೆಬೈಲು, ಬೇಳೂರು, ತ್ರಾಸಿ, ಅಂಪಾರು, ಹೊಸಾಡು, ಶಂಕರನಾರಾಯಣ, ಕುಂದಬಾ ರಂದಾಡಿ, ಮಚ್ಚಟ್ಟು,, ನೂಜಾಡಿ, ಹರ್ಕೂರು ಗ್ರಾಮಗಳಲ್ಲಿ 26 ಮನೆಗಳಿಗೆ ಹಾನಿಯಾಗಿ ಒಟ್ಟು 9 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
PublicNext
18/07/2022 01:58 pm