ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಗುರುಪುರ ಗುಡ್ಡ ಕುಸಿತ,ಸಂಚಾರ ವರ್ಗಾವಣೆ,ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಬಜಪೆ:ಮೂಡಬಿದಿರೆ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುರುಪುರ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ, ಹೆದ್ದಾರಿ ಕುಸಿಯುವ ಭೀತಿ ಹೆಚ್ಚಾಗಿದೆ. ಸದ್ಯ ಮಂಗಳೂರು-ಮೂಡಬಿದ್ರೆ ಭಾಗದ ಬಸ್ ಸಹಿತ ಘನ ವಾಹನ ಸಂಚಾರ ಬೇರೆಡೆಗೆ ವರ್ಗಾಯಿಸಲಾಗಿದೆ.

ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಹೆದ್ದಾರಿಯ ಎರಡು ಮುಖ್ಯ ತಿರುವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಪ್ರಸಕ್ತ ಗುಡ್ಡ ಕುಸಿದ ಜಾಗದಲ್ಲೇ ಭಾರೀ ನೀರಿನ ಝರಿಯೊಂದು ಇದ್ದು, ಮಣ್ಣು ಕುಸಿತ ಹೆಚ್ಚಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಒಂದೊಮ್ಮೆ ಮಳೆಗೆ ಮಣ್ಣು ಕುಸಿಯುತ್ತ ಹೋದಲ್ಲಿ ಹೆದ್ದಾರಿಯೇ ತುಂಡಾಗುವ ಸಾಧ್ಯತೆ ಇದೆ.

ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿ, ಪರಿಸ್ಥಿತಿ ಅವಲೋಕಿಸಿ ಹೆದ್ದಾರಿ ವಿಭಾಗ ಮತ್ತು ಬಜ್ಪೆ ಠಾಣಾ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತಾತ್ಕಾಲಿಕ ಪರಿಹಾರಕ್ಕೆ ಸೂಚನೆ ನೀಡಿದರು. ಇವರೊಂದಿಗೆ ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯರಾದ ಜಿ. ಎಂ ಉದಯ ಭಟ್, ರಾಜೇಶ್ ಸುವರ್ಣ, ಪಿಡಿಒ ಅಬೂಬಕ್ಕರ್ ಇದ್ದರು.

ಸತತ ಮಳೆಯಿಂದ ಇಲ್ಲಿ ಹೆಚ್ಚಿನ ಅಪಾಯ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೆದ್ದಾರಿಯ ಮಧ್ಯಭಾಗದವರೆಗೆ ಒಳಗಿನಿಂದ ಮಣ್ಣು ಸವೆತವಾಗಿದೆ. ಸುರಕ್ಷತೆ ದೃಷ್ಟಿಯಿಂದ ಗುರುಪುರ ಕೈಕಂಬ ಜಂಕ್ಷನ್‍ನಿಂದ ಬಜ್ಪೆ ಮರವೂರಾಗಿ ನಗರ ಪ್ರವೇಶಿಸುವಂತೆ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೆಲವು ವಾಹನಗಳಿಗೆ ಪಂಚಾಯತ್ ರಸ್ತೆ ಮೂಲಕ ಬಂಡಸಾಲೆಯಾಗಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಕೆಲವು ಬಸ್‍ಗಳ ಸಹಿತ ಇತರ ವಾಹನಗಳು ಅಣೆಬಳಿ ಹೆದ್ದಾರಿಯ ಒಂದು ಪಾಶ್ರ್ವದಲ್ಲಿ ಸಂಚರಿಸುತ್ತಿದ್ದು, ಅಗಲ ಕಿರಿದಾದ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ರಸ್ತೆ ವಿಸ್ತರಿಸುವ ನಿಟ್ಟಿನಲ್ಲಿ ರಸ್ತೆ ಪಕ್ಕದಲ್ಲಿ ಜಲ್ಲಿಹುಡಿ ತುಂಬಿಸಲಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

05/07/2022 11:04 pm

Cinque Terre

14.3 K

Cinque Terre

0