ವರದಿ: ದಾಮೋದರ ಮೊಗವೀರ ನಾಯಕವಾಡಿ.
ಬೈಂದೂರು: ಸತತ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಕ್ಕ-ಪಕ್ಕ ಊರುಗಳಾದ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಮುಂತಾದ ಪ್ರದೇಶಗಳು ಸಂಪೂರ್ಣ ಮುಳುಗಡೆ ಭೀತಿಯಲ್ಲಿದೆ.
ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗಿದೆ. ಸ್ಥಳೀಯರು ಇದೀಗ ದನಕರುಗಳನ್ನು ಬೇರೆಡೆಗೆ ಸಾಗಿಸಲು ಹರಸಾಹಸಪಡುತ್ತಿದ್ದಾರೆ. ಮನುಷ್ಯರಾದರು ಹೇಗಾದರೂ ಬದುಕಬಹುದು ಸಮಯದಲ್ಲಿ ದನಕರುಗಳನ್ನು ಹೇಗೆ ಸಾಧಿಸುವುದು ಎಂಬ ಗೋಳು ಸ್ಥಳೀಯರದ್ದಾಗಿದೆ.
ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಮಳೆ ಹೆಚ್ಚಾಗಿದೆ ಗಾಳಿ ರಭಸಕ್ಕೆ ಮರಗಳು ನೆಲಕ್ಕೆ ಉರುಳಿದೆ ಹಾಗೂ ಕರೆಂಟ್ ಕಂಬಗಳು ಬಿದ್ದಿದೆ.
ಬೈಂದೂರು ತಹಸೀಲ್ದಾರರ ಕಿರಣ್ ಗೌರಯ್ಯ ಅವರು ಜಲಾವೃತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವೇಳೆ ಪಬ್ಲಿಕ್ ನೆಸ್ಟ್ ಜೊತೆ ಮಾತಾಡಿದ ಅವರು, ಮಳೆಯಿಂದಾಗಿ ನೆರೆ ನೀರು ಹೆಚ್ಚಿರುವಲ್ಲಿ ಜನರಿಗೆ ಅಗತ್ಯ ಮುನ್ಸೂಚನೆ
ನೀಡಲಾಗಿದೆ.
ಅನಿವಾರ್ಯತೆ ಬಿದ್ದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ದೋಣಿ ಬೇಡಿಕೆ ಇರುವಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೇಪ್ಟಿ ಜಾಕೇಟ್ ಬೇಡಿಕೆಯಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ತಹಶೀಲ್ದಾರ್ ಕಿರಣ್ ಗೌರಮ್ಮ,ವಿಎ ಹನುಮಂತ ರಾಯ್, ಪಿಡಿಒ ಪ್ರಕಾಶ್, ಬೈಂದೂರು ವಿಎ ಮಂಜುನಾಥ ಬಿಲ್ಲವ, ರಾಕೇಶ್ ಬಡಾಕೆರೆ, ಕಾರ್ಯದರ್ಶಿ ಪಾರ್ವತಿ ಉಪಸ್ಥಿತರಿದ್ದರು.
Kshetra Samachara
05/07/2022 11:00 pm