ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇಂದು ಬೆಳಿಗ್ಗೆ ಲಘುವಾಗಿ ಭೂಮಿ ಕಂಪಿಸಿದೆ. ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್‌ಗಳು ಕಂಪಿಸಿವೆ.
ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇನ್ನು ಕುಳಿತುಕೊಂಡ ಕುರ್ಚಿ ಅಲುಗಾಡಿದೆ. 4-5 ಸೆಕೆಂಡ್ ಕಂಪಿಸಿದರ ಜೊತೆಗೆ ಭಾರೀ ಶಬ್ದ ಕೇಳಿತ್ತು. ಇನ್ನು ಕೆಲವರಿಗೆ ಬೈಕ್‌ನಲ್ಲಿ ಕುಳಿತಿದ್ದಾಗ ಬೈಕ್ ಒಮ್ಮೆಗೆ ಅಲುಗಾಡಿದ ಅನುಭವ ಆಗಿದೆ. ಮನೆಯ ಟೇಬಲ್, ಕುರ್ಚಿಗಳು ಕಂಪಿಸಿದೆ. ಗುತ್ತಿಗಾರು ಭಾಗದಲ್ಲಿ 5 ಸೆಕೆಂಡ್‌ಗಳ ಕಾಲ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ, ಜೆಸಿಬಿ ಹತ್ತಿರ ದ ಹಾಗೆ ವಿಚಿತ್ರ ಶಬ್ದ ಕೇಳಿ ಬಂದಿದೆ. ಸುಳ್ಯ ವಿಷ್ಣು ಸರ್ಕಲ್ ಭಾಗದಲ್ಲಿ ಕೆಲವು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಸ್ಪಷ್ಟ ಅನುಭವ ಆಗಿದೆ. ರವಿವಾರ ಕರಿಕೆ ಸಮೀಪ ರಿಕ್ಟರ್ ಸ್ಕೇಲ್‌ನಲ್ಲಿ 2.3 ತೀವ್ರತೆಯ ಕಂಪನ ಆಗಿ ಅದರ ಪ್ರತಿಫಲನ ಈ ಭಾಗದಲ್ಲಿ ಉಂಟಾಗಿತ್ತು.
Kshetra Samachara
28/06/2022 11:14 am