ಉಡುಪಿ: ಗೂಳಿ ಕಾಳಗ ಸಾಮಾನ್ಯ. ಆದರೆ ಇದು ಹಲಸಿನ ಹಣ್ಣಿಗಾಗಿ ನಡೆದ ಗೂಳಿ ಕಾಳಗ ಕೆಲ ಹೊತ್ತು ನೋಡುಗರ ಆಸಕ್ತಿ ಕೆರಳಿಸಿತು. ಉಡುಪಿ ನಗರದ ಬ್ರಹ್ಮಗಿರಿ ಪರಿಸರದಲ್ಲಿ ಸಾಕಷ್ಟು ಹಲಸಿನ ಹಣ್ಣಿನ ಮರಗಳಿವೆ.ಮರದಿಂದ ಬಿದ್ದಿದ್ದ ಹಲಸಿನ ಹಣ್ಣನ್ನು ನೋಡಿದ ಗೂಳಿಗಳೆರಡು ಅದನ್ನು ತಿನ್ನಲು ಬಂದಿವೆ.
ಸಹಜವಾಗಿಯೇ ಹಲಸಿನ ಹಣ್ಣಿಗೆ ಹಕ್ಕು ಸ್ಥಾಪಿಸಲು ಎರಡೂ ಗೂಳಿಗಳು ಕೆಲ ಹೊತ್ತು ಕಾದಾಟ ನಡೆಸಿವೆ.ಈ ದೃಶ್ಯ ಕೆಲ ಹೊತ್ತು ಅಲ್ಲಿದ್ದವರನ್ನು ಸೂಜಿಗಲ್ಲಿನಂತೆ ಸೆಳೆದದ್ದು ಸುಳ್ಳಲ್ಲ.ಸಹಜವಾಗಿಯೇ ಕಾಳಗದಲ್ಲಿ ಗೆದ್ದ ಗೂಳಿ ಹಲಸಿನ ಹಣ್ಣನ್ನು ಚಪ್ಪರಿಸ್ತಾ ತಿಂದೇ ಬಿಟ್ಟಿತು!
Kshetra Samachara
26/06/2022 01:12 pm