ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗಾಳಿ-ಮಳೆಗೆ ಮರ ಬಿದ್ದು ಮನೆಗಳಿಗೆ ಹಾನಿ, ಹಸುಗೂಸುಗಳು ಪಾರು!

ಕುಂದಾಪುರ: ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಮಳೆಯಾಗುತ್ತಿದ್ದು, ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಸಾಂತಾವರ ಎಂಬಲ್ಲಿ ಎರಡು ಮನೆಗಳಿಗೆ ಹಾನಿಯುಂಟಾಗಿದೆ.

ಕಂದಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ‌ ಸಾಂತಾವರದಲ್ಲಿ ಶಾರದಾ ದೇವಾಡಿಗ, ಬಾಬಿ ದೇವಾಡಿಗ ಎನ್ನುವವರ ಮನೆಗೆ ಹಾನಿಯುಂಟಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಬೀಸಿದ ಭಾರಿ ಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.

ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಬಾಬಿ ಮನೆಯಲ್ಲಿದ್ದ 9 ತಿಂಗಳ ಗಂಡು ಮಗು ಮತ್ತು 6 ವರ್ಷದ ಗಂಡು ಮಗು ಪಾರಾಗಿದೆ.

ಶಾರದಾ ಮನೆಯಲ್ಲಿದ್ದ 3 ವರ್ಷದ ಮಗು ಮತ್ತು 8 ವರ್ಷದ ಬಾಲಕಿ ಕೂಡ ಪಾರಾಗಿದ್ದಾರೆ. ಎರಡು ಮನೆ ಸೇರಿ ಅಂದಾಜು 7ರಿಂದ 8 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಂದಾವರ ಗ್ರಾಮ ಪಂ‌ಚಾಯತಿ ಉಪಾಧ್ಯಕ್ಷೆ ಶೋಭಾ, ಸದಸ್ಯ ಸೀನ ಪೂಜಾರಿ, ಗ್ರಾಮ ಲೆಕ್ಕಿಗ ಧೀರಜ್ ಇವತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Manjunath H D
PublicNext

PublicNext

17/05/2022 06:29 pm

Cinque Terre

52.39 K

Cinque Terre

0