ಮಲ್ಪೆ: ಇಂದು ಸೂರ್ಯಾಸ್ತದ ಸಂದರ್ಭ ಮಲ್ಪೆ ಕಡಲಿನಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡಿತ್ತು! ಈ ಹೊತ್ತು ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಏಕಾಏಕಿ ಸಮುದ್ರದ ನಡುವೆ ಸುಳಿಗಾಳಿ ಎದ್ದಿದೆ.
ಬಿಸಿಲು ಮತ್ತು ತಂಪಿನ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾದ ವೇಳೆ ಸಮುದ್ರದ ನೀರು ಆಗಸಕ್ಕೆ ಚಿಮ್ಮಿದೆ. ಮಲ್ಪೆ ಕಡಲತೀರದಲ್ಲಿ ನೂರಾರು ಪ್ರವಾಸಿಗರು ಸೇರಿದ್ದರಿಂದ ಈ ಅಪರೂಪದ ದೃಶ್ಯವನ್ನು ಕಣ್ತುಂಬಿ, ರೋಮಾಂಚನಗೊಂಡರು. ಹಿಂದೊಮ್ಮೆ ಇಂತಹದ್ದೇ ಸುಳಿಗಾಳಿಗೆ ಮೀನುಗಾರಿಕೆ ಬೋಟ್ ಸಿಲುಕಿ ಅವಘಡ ಸಂಭವಿಸಿತ್ತು ಎಂದು ಸ್ಥಳೀಯರು ಹೇಳಿದರು. ಆದರೆ, ಈ ಬಾರಿ ಅದೃಷ್ಟವಶಾತ್ ಅಂತಹ ಯಾವುದೇ ಅವಘಡ ಘಟಿಸಿಲ್ಲ.
PublicNext
06/05/2022 10:05 pm