ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮನುಷ್ಯನ ಮುಖವನ್ನೇ ಹೋಲುವ ಕೀಟ ಪತ್ತೆ: ಪ್ರಕೃತಿ ಪ್ರಿಯರಲ್ಲಿ ಬೆರಗು!

ಕಾರ್ಕಳ: ಥೇಟ್ ಮನುಷ್ಯನನ್ನೇ ಹೋಲುವ ಕೀಟವೊಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪತ್ತೆಯಾಗಿದ್ದು, ಪ್ರಕೃತಿ ಪ್ರಿಯರ ಆಸಕ್ತಿ ಕೆರಳುವಂತೆ ಮಾಡಿದೆ. ಇದು ಪತ್ತೆಯಾಗಿರುವುದು ಕಾರ್ಕಳದ ಬೈಪಾಸ್ ಬಳಿಯ ತಾಳೆತೋಟವೊಂದರಲ್ಲಿ.

ಈ ಕೀಟದ ತಲೆಯಲ್ಲಿರುವ ಟೋಪಿ, ಎರಡು ಕಣ್ಣು, ದೊಡ್ಡ ಮೂಗಿನ ಕೆಳಗಿನ ಮೀಸೆಯಿಂದಾಗಿ ಇದು ಪಕ್ಕಾ ಮನುಷ್ಯನನ್ನೇ ಹೋಲುತ್ತದೆ. ಮ್ಯಾನ್ ಫೇಸ್ಡ್ ಬಗ್ ಎಂದು ಕರೆಯಲ್ಪಡುವ ಈ ಕೀಟ ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿಯಲ್ಲಿ ಅಪರೂಪಕ್ಕೆ ಕಂಡು ಬರುತ್ತವೆ. ಕೆಂಪು, ಹಳದಿ , ಕಿತ್ತಳೆ, ಕಂದು ಬಣ್ಣ ಮಿಶ್ರಿತ ಈ ಕೀಟ ಹೆಚ್ಚಾಗಿ ಗಿಡಗಳಲ್ಲಿ ಕಂಡುಬರುತ್ತವೆ.

ಸೆಖೆ ವಿಪರೀತ ಇರುವ ಫೆಬ್ರವರಿಯಿಂದ ಮೇ ತನಕನ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಕೀಟವು ಚಿಗುರು, ಕಾಂಡ, ಹಣ್ಣಿನಿಂದ ರಸ ಹೀರುತ್ತವೆ. ತಾಳೆ ಗರಿಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆಟವಾಡುವ ಮ್ಯಾನ್ ಫೇಸ್ಡ್ ಬಗ್ ನಿರುಪದ್ರವಿ. ರೈತರು ಯಾವುದೇ ರೀತಿಯಲ್ಲೂ ಗಾಭರಿಯಾಗಬೇಕಿಲ್ಲ, ಕೃಷಿಗೂ ಯಾವ ಹಾನಿಯನ್ನೂಮಾಡೋದಿಲ್ಲ. ಗಂಡು ಗಾತ್ರದಲ್ಲಿ ಚಿಕ್ಕದಾದರೆ, ಹೆಣ್ಣು ಸ್ವಲ್ಪ ದೊಡ್ಡದು. ಕಳೆ ಗಿಡಗಳಲ್ಲಿ ಹೆಚ್ಚಾಗಿರುವ ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ. 25ರಿಂದ 30ದಿನವಷ್ಟೇ ಇದರ ಅಯುಷ್ಯ.

Edited By :
PublicNext

PublicNext

28/04/2022 11:47 am

Cinque Terre

38.54 K

Cinque Terre

0