ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಮತ್ತೆ ಕಾಡುಕೋಣ ಪ್ರತ್ಯಕ್ಷ ; ಕೃಷಿ ನಾಶ

ಮುಲ್ಕಿ:ಕಿನ್ನಿಗೋಳಿ ಸಮೀಪದ ಉಳೆಪಾಡಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ಕಾಡುಕೋಣ ಮರು ಪ್ರತ್ಯಕ್ಷವಾಗಿದೆ .ಕಾಡುಕೋಣವು ಗದ್ದೆ ಮನೆಯ ಮುಂಭಾಗದಲ್ಲಿ ತೋಟಗಳಲ್ಲಿ ನುಗ್ಗಿ ಹಲವು ಬಾಳೆ ಅಡಿಕೆ ತೆಂಗಿನ ಗಿಡಗಳು ಹಾನಿ ಮಾಡಿದೆ.

ಕೆಲವೇ ದಿನಗಳ ಹಿಂದೆ ಕಿನ್ನಿಗೊಳಿ ಬಳಕುಂಜೆ ಹೆದ್ದಾರಿಯ ಕುಕ್ಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ಕಾಡುಕೋಣವೊಂದು ಪ್ರತ್ಯಕ್ಷವಾಗಿದ್ದು ಈಗ ಮರು ಪ್ರತ್ಯಕ್ಷಗೊಂಡು ಸ್ಥಳೀಯ ನಾಗರಿಕ ದಲ್ಲಿ ಆತಂಕದ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ.

ಕಾಡುಕೋಣ ನೋಡಿದ್ದ ಸ್ಥಳೀಯರು ಬೆಳಿಗ್ಗೆ ಅದರ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ

ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/03/2022 11:00 pm

Cinque Terre

6.62 K

Cinque Terre

0