ಮಂಗಳೂರು: ನಗರದ ತೋಟ ಬೆಂಗ್ರೆಯಲ್ಲಿ ನೆಹರು ಯುವ ಕೇಂದ್ರ, ಎನ್‌ಸಿಸಿ ತಂಡ ಮತ್ತು ಮಂಗಳೂರು ಮನಪಾ ವತಿಯಿಂದ 'ಸ್ವಚ್ಛತಾ ಏವಂ ಶ್ರಮದಾನ' ಹಾಗೂ ಪುನೀತ್ ಸಾಗರ ಅಭಿಯಾನದ ಭಾಗವಾಗಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಉದ್ಘಾಟಿಸಿದರು. ಅಭಿಯಾನದಲ್ಲಿ 450ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು, ಸ್ವಯಂ ಸೇವಕರು ಭಾಗವಹಿಸಿದ್ದರು. ಕಡಲ ತೀರದಿಂದ ಸುಮಾರು 5,200 ಕೆ.ಜಿ. ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಸಂಗ್ರಹಿಸಲಾಯಿತು. ಅಭಿಸಾರಂಗ್ ಯುವ ಸಂಘಟನೆಯ ಸಂಕೇತ್ ಕುಮಾರ್, ಶಿಲ್ಪಾ ಬೆಂಗ್ರೆ, ಮಂಗಳೂರು ನಗರ ರೋಟರಿ ಕ್ಲಬ್ ನ ಡಾ.ರಂಜನ್ ಬಳಗ, ಮಂಗಳೂರಿನ ರೋಟರಿ ಕ್ಲಬ್, ಸ್ಥಳೀಯ ಯುವ ಸಂಘಟನೆ ಅಭಿಸಾರಂಗ್ ಸಾಥ್ ನೀಡಿದರು.
18 ಕೆಎಆರ್ ಬೆಟಾಲಿಯನ್ ಎನ್ ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ನಿತಿನ್ ಬಿಢೆ, ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ನೇತೃತ್ವ ವಹಿಸಿದ್ದರು.
Kshetra Samachara
30/12/2021 09:46 pm