ಮಲ್ಪೆ: ಕ್ರಿಸ್ಮಸ್ ,ನ್ಯೂ ಇಯರ್ ನಿಂದಾಗಿ ಸಾಲು ಸಾಲು ರಜೆಗಳು ಬಂದಿವೆ.ಕೊರೋನಾದಿಂದ ಎರಡು ವರ್ಷ ಕಂಗೆಟ್ಟು ಕುಳಿತ ಜನ ಈ ಬಾರಿ ಪ್ರವಾಸ ಮಾಡಿ ಎಂಜಾಯ್ ಮಾಡೋಕೆ ನಿರ್ಧಾರಿಸಿದ್ದಾರೆ.ಪ್ರವಾಸಿಗರ ದಂಡು ಮಲ್ಪೆಯತ್ತಮುಖಮಾಡಿದೆ .ಹೀಗಾಗಿ ಪ್ರವಾಸಿಗರ ಸ್ವರ್ಗ ಉಡುಪಿಯ ಮಲ್ಪೆ ಬೀಚ್ ಮತ್ತಷ್ಟು ರಂಗೇರಿದೆ.ಇಷ್ಟು ದಿನ ಖಾಲಿ ಖಾಲಿಯಾಗಿದ್ದ ಕಡಲ ತೀರ ಇವತ್ತು ಜನಸ್ತೋಮದಿಂದ ತುಂಬಿ ತುಳುಕುತ್ತಿತ್ತು.ಅಲೆಗಳ ಜೊತೆ ಆಟವಾಡುವುದರ ಜೊತೆಗೆ ಸಮುದ್ರದ ಮದ್ಯೆ ವಾಟರ್ ಸ್ಪೋರ್ಟ್ಸ್ ನಲ್ಲೂ ಎಂಜಾಯ್ ಮಾಡ್ತಿದ್ದಾರೆ.
ಪ್ರವಾಸಿಗರ ಖುಷಿಗೆ ಮತ್ತಷ್ಟು ಮೆರುಗು ನೀಡಿವಂತೆ, ವಾಟರ್ ಸ್ಪೋರ್ಟ್ಸ್ ಕೂಡ ಪ್ರಾರಂಭಗೊಂಡಿದೆ. ಬಲಾನ್ ಬೋಟ್, ಜಟ್ಸ್‌ಕೀ, ಜಾರ್ಬಿಂಗ್, ಪ್ಯಾರಾಚೂಟ್ ಸೇರಿದಂತೆ ಮಲ್ಪೆ ಬೀಚ್ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.ಒಟ್ನಲ್ಲಿ ಕೃಷ್ಣನಗರಿಯಲ್ಲಿ ಕ್ರಿಸ್ಮಸ್, ಇಯರ್ ಎಂಡ್ ಕಳೆಯಲು ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Kshetra Samachara
25/12/2021 10:28 pm