ಮುಲ್ಕಿ: ಕಳೆದ ಎರಡು ದಿನಗಳಿಂದ ಚಂಡಮಾರುತದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಅಕಾಲಿಕ ಮಳೆ ಭತ್ತದ ಬೆಳೆಗಾರರು ನಷ್ಟ ಅನುಭವಿಸುಂತಾಗಿದೆ. ಪಕ್ಷಿಕೆರೆ ಸಮಿಪದ ಕೆಮ್ರಾಲ್ , ಪಂಜ ಬೈಲಗುತ್ತು ಪರಿಸರದಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು , ಈಗಾಲೇ ಹಲವಾರು ಎಕರೆ ಕಟಾವು ಆಗಿ ಆಕಳಿನ ಮೇವುಗಾಗಿ ಉಪಯೋಗಿಸುವ ಬೈಹುಲ್ಲು ಗದ್ದೆಯಲ್ಲಿ ನೀರು ನಿಂತು ನೆನೆದು ಕೊಳೆಯಲಾಂಬಿಸಿದೆ.
ಇನ್ನು ಕಟಾವಿಗೆ ಬಂದ ಭತ್ತದ ಗದ್ದೆಯಲ್ಲಿ ನೀರು ನಿಲ್ಲುವುದರಿಂದ ಅಡ್ಡ ಬಿದ್ದ ಭತ್ತಕ್ಕೆ ಮೊಳೆಕೆ ಬಂದು ಬೆಳೆ ನಷ್ಟ ಉಂಟಾಗುತ್ತಿದ್ದು ರೈತರ ಸಂಕಷ್ಟಕ್ಕೆ ಪರಿಹಾರ ಬೇಕಾಗಿದೆ. ಮಳೆಯಿಂದ ಭತ್ತ ಗದ್ದೆಯಲ್ಲಿನ ಬೈಹುಲ್ಲು ಕೊಳೆತು ಹೊದರೆ, ಕಾಡು ಪ್ರಾಣಿಗಳಿಂದ ಹಾನಿ ಗೊಂಡರೆ ಬೆಳೆವಿಮೆ ಮಂಜೂರಾತಿ ಇಲ್ಲ ಎಂಬ ಮಾಹಿತಿ ಗ್ರಾಮ ಸಭೆಯಲ್ಲಿ ತಿಳಿಸಲಾಗಿದೆ.
ಸುಮಾರು 5 ಎಕರೆ ಪ್ರದೇಶದಲ್ಲಿ ಭತ್ತ ಕಟಾವು ಆಗಿದ್ದು ಮಳೆ ಬಂದು ಗದ್ದೆಯಲ್ಲಿ ನೀರು ನಿಂತು ಬೈ ಹುಲ್ಲು ಕೊಳೆತು ಹೋಗುತ್ತಿದೆ ಇದರಿಂದ ನಷ್ಟ ಉಂಟಾಗಿದೆ. ಕೂಡಲೇ ಸಂಬಂಧ ಪಟ್ಟವರು ಕೃಷಿಕರಿಗೆ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.
Kshetra Samachara
08/10/2021 09:39 am