ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದ್ದು ಕೆಲಕಾಲ ಗ್ರಾಮಸ್ಥರು ಗಾಬರಿಗೊಂಡ ಪ್ರಸಂಗ ನಡೆಯಿತು.ನೀರಿಗೆ ಬಿದ್ದಿದ್ದ ಚಿರತೆ ಮೇಲೆ ಬರಲಾಗದೆ ಅತ್ತಿಂದಿತ್ತ ಓಡಾಡುತ್ತಿತ್ತು.
ಈ ಚಿರತೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಫ್ಲೋರಿನ್ ಮಿನೇಜಸ್ ಎಂಬುವವರ ತೋಟದ ಬಾವಿಗೆ ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ರವಾನೆ ಮಾಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಸ್ಥಳೀಯರ ನೆರವಿನಿಂದ ಚಿರತೆಯನ್ನು ಉಪಾಯದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದಾರೆ.
Kshetra Samachara
24/09/2021 01:16 pm