ಮಲ್ಪೆ: ಕೆಲವೇ ದಿನಗಳ ಅಂತರದಲ್ಲಿ ಮಲ್ಪೆ ಬೀಚ್ ನಲ್ಲಿ ನಡೆಯಬಹುದಾಗಿದ್ದ ಮತ್ತೊಂದು ದುರಂತ ತಪ್ಪಿದೆ.ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸುವ ಮೂಲಕ ಮೂವರ ಪ್ರಾಣ ಉಳಿಸಿದ್ದಾರೆ.
ಈ ಯುವಕರು ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದರು.ಈಜುತ್ತಾ ಕಡಲಿನ ಆಳಕ್ಕೆ ಹೋಗಿ ಮುಳುಗುವ ಹಂತದಲ್ಲಿದ್ದರು.ಗುಲ್ಬರ್ಗ ಜಿಲ್ಲೆಯ ಅನಿಲ್ ಕುಮಾರ್, ಅಬ್ಬಾಸ್ ಅಲಿ ಮತ್ತು ನಿತಿನ್ ಮಂಡ್ಯ ಎಂಬುವವರೇ ಈ ಯುವಕರು. ಮುಳುಗುತ್ತಿದ್ದ ಮೂವರನ್ನು ಜೀವರಕ್ಷಕ ದಳದ ಮಧು ಬೋಟು ಬಳಸಿ ರಕ್ಷಣೆ ಮಾಡುವುದರೊಂದಿಗೆ ಕೂದಲೆಳೆಯ ಅಂತರದಲ್ಲಿ ದುರಂತ ತಪ್ಪಿಸಿದ್ದಾರೆ.
Kshetra Samachara
23/09/2021 06:49 pm