ಮಣಿಪಾಲ: ಹಳೆ ಕಾಲದ ಕಾರು ,ಬೈಕ್ ಗಳ ಕ್ರೇಜ್ ಕೆಲವರಿಗಿರುತ್ತದೆ.ಅವನ್ನು ಈ ಕಾಲದಲ್ಲಿ ನೋಡುವುದೇ ಒಂದು ಚಂದ. ಆದರೆ ಮಣಿಪಾಲ ಸಮೀಪದ ಪರ್ಕಳದಲ್ಲಿ ಶತಮಾನ ಕಂಡ ಎತ್ತಿನ ಗಾಡಿಯೊಂದು ಜನರನ್ನು ಆಕರ್ಷಿಸುತ್ತಿದೆ.
ಪರ್ಕಳದ ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ್ ಅವರ ಮನೆಯಲ್ಲಿ ಈ ಹಳೆ ಕಾಲದ, ಮೂರು ತಲೆಮಾರು ಕಂಡ ಎತ್ತಿನ ಗಾಡಿಯಿದೆ. ಹಿಂದಿನ ಕಾಲದಲ್ಲಿ ಬೈಲೂರು, ಕಾರ್ಕಳ, ಹೆಬ್ರಿ, ಉಡುಪಿ ಮೊದಲಾದ ಕಡೆ ಸಂತೆ ನಡೆಯುವಲ್ಲಿ
ಅಕ್ಕಿ ಮೂಟೆ, ದಿನಸಿ ಸಾಂಬಾರು ಪದಾರ್ಥ, ಬೆಲ್ಲದ ಡಬ್ಬಿ, ಒಡೆದಕಟ್ಟಿಗೆ, ತೆಂಗಿನಕಾಯಿ. ಬೈ ಹುಲ್ಲು, ತರಕಾರಿ ಮುಂತಾದವುಗಳನ್ನು ಸಾಗಿಸಲು ಈ ಭಾಗದಲ್ಲಿ ಯಥೇಚ್ಛ ಎತ್ತಿನ ಗಾಡಿಗಳಿದ್ದವು.
ದಿನೇಶ್ ಶೆಟ್ಟಗಾರ್ ಅವರ ಅಜ್ಜ ದಿವಂಗತ ಕಿಟ್ಟ ಶೆಟ್ಟಿಗಾರ್ ಇದನ್ನು ಮೊದಲು ಉಪಯೋಗಿಸುತ್ತಿದ್ದರಂತೆ. ನಂತರ ಇವರ ತಂದೆ ದಿವಂಗತ ಸಾದು ಶೆಟ್ಟಿಗಾರ್, ಸ್ವಲ್ಪ ಅಂದಗೊಳಿಸಿ ಎತ್ತಿನ ಗಾಡಿಯನ್ನು ಉಪಯೋಗಿಸುತ್ತಿದ್ದರು ಅಂತಾರೆ ಅವರು. ಒಟ್ಟಾರೆ ಮೂರು ತಲೆಮಾರುಗಳನ್ನು ಕಂಡ ಎತ್ತಿನಗಾಡಿ ಇದಾಗಿದ್ದು ಈಗಲೂ ಇವರ ಮನೆಯ ಮುಂದೆ ನಿಲ್ಲಿಸಲಾಗಿದೆ.
ಇವತ್ತಿನ ಸರಕು ಸಾಗಾಟದ ಲಾರಿ ಟೆಂಪೋ ಇತರೆ ವಾಹನಗಳ ವ್ಯಾಲಿಡಿಟಿ 15 ವರ್ಷದಿಂದ 25 ವರ್ಷ.ನಂತರ ಗುಜರಿಗೆ ಹೋಗುತ್ತದೆ. ಆದರೆ ಈ ಎತ್ತಿನ ಬಂಡಿ ಶತಮಾನ ಕಂಡಿರುವುದು ಮತ್ತು ಈಗಲೂಉಪಯೋಗಿಸುವ ಸ್ಥಿತಿಯಲ್ಲಿರುವುದು ಅಚ್ಚರಿಯೇ ಸರಿ.
PublicNext
14/07/2022 03:25 pm