ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಎಂದೆಂದೂ ಬರಿದಾಗದ ನೀರಿನ ಕುಂಡ; ಇದೊಂದು ವಿಶೇಷ ಗಣಪ

ಮೂಡುಬಿದಿರೆ: ತಾಲೂಕಿನ ದರಗುಡ್ಡೆ ಗ್ರಾಮದಲ್ಲಿ ವಿಶೇಷ ದೇವಳವಿದ್ದು 9 ಗ್ರಾಮಗಳನ್ನು ಒಳಗೊಂಡಿರುವ ಪಣಪಿಲ ಅರಮನೆಯ ಕೊನ್ನಾರ ಮಾಗಣೆಗೆ ಸಂಬಂಧಪಟ್ಟ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಇಂತಹದೊಂದು ಪ್ರಕೃತಿಯ ವಿಸ್ಮಯವಿದೆ. ದರೆಗುಡ್ಡೆಯ ವಿಠಲ ಎನ್ನುವ ಪ್ರದೇಶದಲ್ಲಿ ಪ್ರಕೃತಿ ಸೊಬಗಿನ ತಪ್ಪಲಿನಲ್ಲಿ ಈ ದೇವಸ್ಥಾನದಲ್ಲಿ ಮೂರು ಕುಂಡಗಳಲ್ಲಿ ನೂರಾರು ವರ್ಷಗಳಿಂದ ನೀರು ಬರಿದಾಗಿಲ್ಲ.

ಈ ಕುಂಡದ ನೀರನ್ನೇ ದೇವಳದಲ್ಲಿ ಉಪಯೋಗಿಸಲಾಗುತ್ತಿದೆ. ಈ ಮೂರು ಕುಂಡ ದೇವಸ್ಥಾನದ ಅಭಿಷೇಕ ಸಹಿತ ದೈನಂದಿನ ಪೂಜಾವಿಧಿಗಳಿಗೆ ಉಪಯೋಗವಾಗುತ್ತಿದೆ. ಸಂಕ್ರಮಣ ಅಥವಾ ಇತರ ವಿಶೇಷ ದಿನಗಳಲ್ಲಿ ಎಷ್ಟೇ ಈ ಕುಂಡಗಳ ನೀರೇ ಉಪಯೋಗವಾಗುತ್ತಿದೆ. ದೇವರ ಗರ್ಭಗುಡಿಯ ಸುತ್ತಲೂ ಇರುವ ಸಣ್ಣ ಕಿರುತೋಡಿನಲ್ಲೂ ನೀರು ಇರುತ್ತದೆ. ದೇವರಿಗೆ ಸೀಯಾಳಾಭಿಷೇಕ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.

ಇಲ್ಲಿರುವ ಗಣಪ, ಅಗ್ನಿ ಗಣಪ. ಇದು ಇತರ ದೇವಸ್ಥಾನಗಳಲ್ಲಿರುವ ಗಣಪತಿ ವಿಗ್ರಹಕ್ಕಿಂತ ಭಿನ್ನ. ಕಾಡಿನ ತುತ್ತ ತುದಿಯಿಂದ ಹರಿಯುತ್ತಿರುವ ನೀರು ದೇಗುಲದ ಬುಡಕ್ಕೆ ಬರುವ ಪ್ರದೇಶದಲ್ಲಿ ಪುರಾತನ ಗಣಪತಿ ವಿಗ್ರಹವಿದೆ. ಗಣಪನ ಮೇಲೆ ಸದಾ ನೀರಿನ ಅಭಿಷೇಕ ನೈಸರ್ಗಿಕವಾಗಿ ಆಗುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. ಹಿಂದೊಮ್ಮೆ ಗಣಪತಿ ವಿಗ್ರಹವನ್ನು ದೇವಸ್ಥಾನದ ಒಳಗೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಡೀ ಊರೇ ದೇವಸ್ಥಾನದ ಬರಗಾಲಕ್ಕೆ ತುತ್ತಾಗಿದ್ದು, ಇಲ್ಲಿನ ಜನರು ಕಷ್ಟ ಅನುಭವಿಸುವಂತಾಗಿತ್ತು. ಆ ಬಳಿಕ ಮತ್ತೆ ನೀರು ಹರಿಯುವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಳು ಅಡಿಯ ಶಿವಲಿಂಗ ವಿಶೇಷತೆ.

Edited By : Nagesh Gaonkar
Kshetra Samachara

Kshetra Samachara

30/10/2020 06:26 pm

Cinque Terre

38.39 K

Cinque Terre

8

ಸಂಬಂಧಿತ ಸುದ್ದಿ