ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸಿರಿಯಾ ಹಡಗು; 15 ಸಿಬ್ಬಂದಿ ರಕ್ಷಣೆ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ಹಡಗು ಅಪಾಯಕ್ಕೆ ಸಿಲುಕಿತ್ತು. ತಕ್ಷಣ ಕೋಸ್ಟ್ ಗಾರ್ಡ್ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

ಸಿರಿಯಾ ದೇಶದ MV Princess Moral ಹಡಗಿನಲ್ಲಿ ಮಂಗಳೂರಿನಿಂದ 5-6 ನಾಟಿಕಲ್ ದೂರದಲ್ಲಿ ಸಮುದ್ರ ಮಧ್ಯೆ ಸಾಗುವಾಗ ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗುತ್ತಿತ್ತು‌. ಈ ಹಡಗು ಓಮನ್ ನಿಂದ ಈಜಿಪ್ಟ್ ಗೆ ಪ್ರಯಾಣ ಬೆಳೆಸಿತ್ತು. ಆದರೆ, ಈ ಹಡಗು ಸಮುದ್ರ ಮಧ್ಯೆ ಪ್ರಯಾಣ ಬೆಳೆಸುವಾಗ ಹಡಗಿನ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಬರಲು ಆರಂಭಿಸಿದೆ‌.

ಪರಿಣಾಮ ಹಡಗಿನೊಳಗಿದ್ದ 15 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕೋಸ್ಟ್ ಗಾರ್ಡ್, ರಕ್ಷಣಾ ಕಾರ್ಯಾಚರಣೆ ನಡೆಸಿ 15 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಇದೀಗ ಈ ಹಡಗನ್ನು ಅಂಡರ್ ವಾಟರ್ ನಲ್ಲಿ ದುರಸ್ತಿ ಮಾಡಲು ಮಂಗಳೂರು ಹಳೆ ಬಂದರು ವ್ಯಾಪ್ತಿಯ ದಕ್ಷಿಣ ಬದಿಯ 5.2 ನಾಟಿಕಲ್ ಮೈಲ್ ದೂರದಲ್ಲಿ ಲಂಗರು ಹಾಕಲಾಗಿದೆ.

Edited By : Nagesh Gaonkar
PublicNext

PublicNext

21/06/2022 10:39 pm

Cinque Terre

65.86 K

Cinque Terre

3