ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದ ನಗರಸಭೆ ಸದಸ್ಯ ರಮೇಶ್ ಕಾಂಚನ್!

ಬೈಲೂರು: ನಗರದ ಬೈಲೂರು ವಾರ್ಡ್ ನಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸ್ಥಳಿಯರಲ್ಲಿ ಅತಂಕವುಂಟು ಮಾಡಿತ್ತು.ತಕ್ಷಣಕ್ಕೆ ಹಾವು ಹಿಡಿಯಲು ಯಾರೂ ಸಿಗದ ಕಾರಣ ಕಾಂಗ್ರೆಸ್ ಮುಖಂಡ ,ನಗರಸಭೆ ಸದಸ್ಯ ರಮೇಶ್ ಕಾಂಚನ್ ಸ್ಥಳೀಯರ ಸಹಕಾರದೊಂದಿಗೆ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ ಪ್ರಸಂಗ ನಡೆಯಿತು.

ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಕ್ಕದ ಅಂಗನವಾಡಿ ಕೇಂದ್ರದ ಬಳಿ ಸ್ಥಳೀಯ ನಿವಾಸಿಗಳು ಸೇರಿ ಶ್ರಮದಾನ‌ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕಂಡು ಶ್ರಮದಾನ ಮಾಡುತ್ತಿದ್ದವರು ಗಾಬರಿಗೊಳಗಾಗಿದ್ದಾರೆ. ಹಾವು ಹಿಡಿಯಲು ಯಾರೂ ಸಿಗದೇ ಇದ್ದಾಗ ನಗರಸಭಾ ಸದಸ್ಯ ರಮೇಶ್ ಕಾಂಚನ್ ರನ್ನು ಸಂಪರ್ಕಿಸಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರಸಭೆ ಸದಸ್ಯ ರಮೇಶ್ ಕಾಂಚನ್ ಸ್ಥಳೀಯರ ಸಹಕಾರದೊಂದಿಗೆ ದೊಡ್ಡ ಗಾತ್ರದ ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೆಬ್ಬಾವನ್ನು ಹಸ್ತಾಂತರಿಸಿದರು.

Edited By : Manjunath H D
Kshetra Samachara

Kshetra Samachara

27/09/2021 01:35 pm

Cinque Terre

11.87 K

Cinque Terre

0

ಸಂಬಂಧಿತ ಸುದ್ದಿ