ಮುಲ್ಕಿ: ಮಳೆಗಾಲದ ತೂಫಾನ್ ಸಂದರ್ಭ ಮೀನುಗಾರರಿಗೆ ಮುಲ್ಕಿ ಹಾಗೂ ಹೆಜಮಾಡಿ ಸಮುದ್ರ ದಲ್ಲಿ ತಾಜಾ ಮೀನು ದೊರೆತಿದ್ದು ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಅಗ್ಗದ ಬೆಲೆಯಲ್ಲಿ ತಾಜಾ ಜಾಮೀನಿಗಾಗಿ ಗ್ರಾಹಕರು ಮುಗಿಬಿದ್ದಿದ್ದು ಕೆಲವೇ ಕ್ಷಣಗಳಲ್ಲಿ ಬಿಕರಿಯಾಗಿದೆ.
ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಬುಧವಾರ ಸಂಜೆ ಸಿಗಡಿ ಮೀನು ಹಾಗೂ ಬಂಗುಡೆ ತಾಜಾ ಮೀನು ಕಡಿಮೆ ಬೆಲೆಯಲ್ಲಿ ಮಾರಾಟವಾಗಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಸಿಗಡಿ ಕೆಜಿಗೆ 150 ರೂ, ಬಂಗುಡೆ ಕೆಜಿಗೆ 200 ರೂ ನಂತೆ ಮಾರಾಟವಾಗಿದೆ.
ಈಗಿನ ಮಾರುಕಟ್ಟೆಯಲ್ಲಿ ಸಿಗಡಿ ಮೀನಿಗೆ 250 ರೂ ನಿಂದ500 ರವರೆಗೆ ಇದ್ದರೆ ಕರಾವಳಿಗರ ಜನಪ್ರಿಯ ಬಂಗುಡೆ ಮೀನು ಕೆಜಿಗೆ 350 ನಿಂದ 400 ರೂವರೆಗೆ ಇದೆ ಕಡಿಮೆ ಬೆಲೆಯಲ್ಲಿ ತಾಜಾ ಮೀನು ಪಡೆದ ಗ್ರಾಹಕರ ಮುಖದಲ್ಲಿ ಮಂದಹಾಸ ಬೀರಿದ್ದು ಕೆಲವೇ ಕ್ಷಣಗಳಲ್ಲಿ ಮೀನು ಬಿಕರಿಯಾಗಿದೆ ಎಂದು ಮೀನು ವ್ಯಾಪಾರಿ ಎಂಎಸ್ ಮೊಹಮ್ಮದ್ ಈ ಸಂದರ್ಭ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ
Kshetra Samachara
04/08/2021 08:13 pm