ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಾಡಂಚಿನ ಮನೆಗಳಿಗೆ ಹುಲಿ ಭೀತಿ!; "ನಮ್ಮ ಕಷ್ಟ ಕೇಳೋರಿಲ್ಲ" ನಿವಾಸಿಗಳ ಅಳಲು

ಕುಂದಾಪುರ: ಕುಂದಾಪುರ ತಾಲೂಕಿನ ಕಾಡಂಚಿನ ಮನೆಗಳಿಗೆ ವರ್ಷಂಪ್ರತಿ ಹುಲಿರಾಯನ ಭೀತಿ ಎದುರಾಗುತ್ತಲೇ ಬಂದಿದೆ.

ಕುಂದಾಪುರದ ಕಾವ್ರಾಡಿ ಗ್ರಾಮದ ಅರಾರಿಯಾ ಮೂಕಾಂಬು ಶೆಡ್ತಿ ಮತ್ತು ರೋಹಿನಿ ಶೆಟ್ಟಿ ಯವರ ಮನೆಯಲ್ಲಿ ಇದುವರೆಗೂ 15 ಕ್ಕಿಂತ ಹೆಚ್ಚು ಹಸುಗಳನ್ನು ಹುಲಿ ತಿಂದು ತೇಗಿದೆ. ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಂಚಿನಲ್ಲಿ ಮನೆ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಹುಲಿರಾಯನ ಭಯ ದಿನನಿತ್ಯ. ಮನೆಯಲ್ಲಿ ಹಸು ಸಾಕಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಂಡ ಈ ಕುಟುಂಬಗಳಿಗೆ ಇದೀಗ ತಮ್ಮ ಜೀವನ ನಡೆಸುವುದೇ ಕಷ್ಟವಾಗಿದೆ.

ಕಾವ್ರಾಡಿಯ ವಾಲ್ತೂರಿನ ಅನೇಕ ಮನೆಗಳ ಹಸುಗಳು ಹುಲಿಗೆ ಆಹಾರವಾಗಿದ್ದು, ಇತ್ತ ತಮ್ಮ ಪ್ರಾಣ ಭಯ ಒಂದೆಡೆಯಾದರೆ, ತಮ್ಮದೇ ಹಸು-ಕರು ರಕ್ಷಣೆ ಮಾಡಿಕೊಳ್ಳಲು ಆಗದ ಅಸಹಾಯಕತೆ ಇನ್ನೊಂದೆಡೆ. ಮೊದಮೊದಲು ಕಾಡಿನಲ್ಲಿ ಮೇಯಲು ಹೋದ ಹಸುಗಳನ್ನು ಹುಲಿ ಹಿಡಿಯುತ್ತಿತ್ತು. ಆದರೆ, ಇದೀಗ ಹುಲಿ ಮನೆ ಬಾಗಿಲಿಗೇ ಬಂದು ಹಟ್ಟಿಯಲ್ಲಿರುವ ಹಸುಗಳನ್ನು ಕೊಂಡೊಯ್ಯು ತ್ತಿದೆ!

ಇದು ಹೀಗೆ ಮುಂದುವರಿದರೆ ಹುಲಿ, ಮನೆಯೊಳಗೇ ನುಗ್ಗದಿರದೆ ಎಂಬ ಭಯಾತಂಕ ಬಡಪಾಯಿ ಸ್ಥಳೀಯರನ್ನು ಕಾಡುತ್ತಿದೆ. ಈ ಬಗ್ಗೆ ಸರಕಾರ, ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಗಮನ ಹರಿಸಿ, ತಮ್ಮನ್ನು ಹುಲಿ ಭೀತಿ ಯಿಂದ ಕಾಪಾಡಬೇಕೆಂದು ಅವರು ಮೊರೆ ಇಟ್ಟಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/09/2020 05:53 pm

Cinque Terre

50.08 K

Cinque Terre

2

ಸಂಬಂಧಿತ ಸುದ್ದಿ