ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕರಾವಳಿಗೂ ಬಂತು ಜಪಾನಿನ ಕೊಕೆಡಾಮ ಕಲೆ!

ಬ್ರಹ್ಮಾವರ: ಮನೆಯ ಅಂದ ಹೆಚ್ಚಿಸುವಲ್ಲಿ ಹೂ ಗಿಡಗಳ ಪಾತ್ರ ದೊಡ್ಡದು.ಆದರೆ ನಗರವಾಸಿಗಳಿಗೆ ಸ್ಥಳಾವಕಾಶದ ಕೊರತೆಯಿಂದ ಇದು ಸಾಧ್ಯ ಆಗುವುದಿಲ್ಲ. ಹೀಗಾಗಿ ಮನೆಯ ಒಳಾಂಗಣ, ಹೊರಾಂಗಣದಲ್ಲಿ ನೇತಾಡಿಸಿ ಬೆಳೆಯಬಹುದಾದ ಜಪಾನಿ ಕೊಕೆಡಾಮ ಕಲೆಯನ್ನು ಇಲ್ಲಿಯ ಮಹಿಳೆಯೊಬ್ಬರು ಪರಿಚಯಿಸಿದ್ದಾರೆ.

ಜಪಾನಿನ ಕೊಕೆಡಾಮ ಕಲೆಯನ್ನು ಕರಾವಳಿಯಲ್ಲಿ ಪರಿಚಯಿಸಿದವರು, ಉಡುಪಿ ಜಿಲ್ಲೆಯ ಪೇತ್ರಿ ನಿವಾಸಿ ಪ್ರಸನ್ನ ಅವರು. ಕೊಕೆಡಾಮ ಕಲೆಯನ್ನು ಪ್ರಸನ್ನ ಅವರು ಕಲಿತದ್ದು, ಯೂಟ್ಯೂಬ್ ನೋಡಿ. ಸ್ವಲ್ಪ ಕಾಂಪೋಸ್ಟ್ ಹುಡಿ ತೆಗೆದುಕೊಂಡು ಅದರ ಮಧ್ಯದಲ್ಲಿ ಗಿಡ ಇಟ್ಟು ನಂತರ ಜೇಡಿ ಮಣ್ಣಿನಿಂದ ಅದನ್ನು ಉಂಡೆ ಮಾಡಿಕೊಳ್ಳಬೇಕು. ಅದರ ಸುತ್ತ ಹತ್ತಿ ಬಟ್ಟೆಯಿಂದ ಕಟ್ಟಿ, ನಂತರ ಸುತ್ತಲೂ ತೆಂಗಿನ ನಾರನ್ನು ಹುಡಿ ಮಾಡಿದ ಪಾಚಿಯನ್ನು ಇಟ್ಟು ನೈಲಾನ್ ಹಗ್ಗದಿಂದ ಸುತ್ತಿದರೆ ಸುಲಭವಾಗಿ ಕೊಕೆಡಾಮ ರೆಡಿ. ಇದನ್ನು ಮನೆಯ ಎದುರು ಅಥವಾ ಒಳಗಡೆ ನೇತು ಹಾಕಬಹುದು.ಕೊಕ್ಕೆ ಅಂದರೆ ಜಪಾನಿ ಭಾಷೆಯಲ್ಲಿ ಪಾಚಿ, ಡಾಮ ಅಂದರೆ ಉಂಡೆ. ಇವೆರಡೂ ಒಟ್ಟಾಗಿ ಕೊಕೆಡಾಮ ಆಗಿದೆ.

ಕೊಕೆಡಾಮ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಯಥೇಚ್ಛವಾಗಿ ಆಮ್ಲಜನಕ ಒದಗಿಸಿ ಆರೋಗ್ಯವನ್ನೂ ವೃದ್ಧಿಸುತ್ತದೆ. ಕೊಕೆಡಾಮದಲ್ಲಿ ರಿಬ್ಬನ್ , ಗ್ರಾಸ್, ಪೈಕಾಸ್ ಹೀಗೆ ಸಣ್ಣ ಪುಟ್ಟ ಗಿಡಗಳನ್ನು ಬೆಳೆಯಬಹುದು, ನೀರಿನ ತೇವಾಂಶದಿಂದಲೇ ಇದು ಬೆಳೆಯುವ ಕಾರಣ ಮೂರು ದಿನಕ್ಕೊಮ್ಮೆ ನೀರು ಅದ್ದಿ ತೆಗೆದರೆ ಸಾಕಾಗುತ್ತದೆ.ತಿಂಗಳಿಗೊಮ್ಮೆ ನೀರಿನಲ್ಲಿ ಕರಗುವ ಗೊಬ್ಬರವನ್ನು ತೆಳ್ಳಗೆ ಮಾಡಿ ಅದ್ದಿ ತೆಗೆದರಾಯಿತು.

ಕೊಕೆಡಾಮ ನೋಡವುದಕ್ಕೂ ಅಂದ. ಪರಿಸರಕ್ಕೂ ಆರೋಗ್ಯಕ್ಕೂ ಒಳ್ಳೆಯದು. ಒಂಚೂರು ಶ್ರಮ ಹಾಕಿದರೆ ನೀವೇ ತಯಾರಿಸಿ ಮನೆಯ ಅಂದ ಹೆಚ್ಚಿಸಬಹುದು.ಟ್ರೈ ಮಾಡಿ ನೋಡಿ...

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Somashekar
Kshetra Samachara

Kshetra Samachara

23/09/2022 07:23 pm

Cinque Terre

11.67 K

Cinque Terre

0

ಸಂಬಂಧಿತ ಸುದ್ದಿ