ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕವ್ರಾಡಿ ಗ್ರಾಮದ ಯುವಕನೊಬ್ಬ ಕೋತಿಗಳ ಕಾಟಕ್ಕೆ ಬೇಸತ್ತು ಇದೀಗ ಹೊಸದೊಂದು ಕಸರತ್ತು ಮಾಡಿದ್ದ, ನೀವು ಕಾಣುತ್ತಿರುವುದು ನಾಯಿಯಂತೆ ಗರ್ಜಿಸುತ್ತಿರುವ ಹುಲಿಯಲ್ಲ ಇದು ನಾಯಿನೇ ನಾಯಿಗೆ ಹೇರ್ ಡ್ರೈ ಕಲರ್ ಅನ್ನು ಹೊಡೆದು ಹುಲಿಯ ರೂಪಕ್ಕೆ ತಂದಿದ್ದಾರೆ ಈ ಯುವಕ ಇದರಿಂದ ಕೋತಿಗಳ ಕಾಟ ತಪ್ಪಿದೆಯಂತೆ ,ಹೌದು ಇದೊಂದು ಪುಟ್ಟ ಹಳ್ಳಿ ಪಡುವಾಲ್ತೂರು ಸಣ್ಣಪುಟ್ಟ ಕೃಷಿ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಈ ಮನೆಯವರು, ಕೂಲಿನಾಲಿ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮನೆಯ ಪಕ್ಕದಲ್ಲಿ ಒಂದು ಇಷ್ಟು ಅಡಿಕೆ ತೆಂಗು ತರಕಾರಿ ತೋಟಗಳನ್ನು ಮಾಡಿದ್ದರು, ಆದರೆ ಕೋತಿಗಳ ಕಾಟಕ್ಕೆ ಬೇಸತ್ತು ತಲೆ ಕೆಟ್ಟು ಹೋಗಿತ್ತು ಇವರಿಗೆ, ಏನು ಮಾಡಬೇಕು ಎಂದು ತೋಚದೆ ಕೊನೆಗೆ ಮನೆಯಲ್ಲಿ ಇರುವ ನಾಯಿಗೆ ಹೇರ್ ಕಲರ್ ಹೊಡೆದು ಹುಲಿ ಮತ್ತು ಚಿರತೆಯಮನತೆ ಕಾಣುವ ಹಾಗೆ ಮಾಡಿದ್ದಾರೆ ಈ ಯುವಕ, ಈತನ ಹೆಸರು ಗಣಪತಿ, ಸ್ನೇಹಿತರೊಬ್ಬರ ಸಹಾಯದ ಮೇರೆಗೆ ಈ ರೀತಿ ಬಣ್ಣ ಹಚ್ಚಿ ಕೋತಿಗಳನ್ನು ಓಡಿಸಲು ಹೊಸ ತಂತ್ರವನ್ನು ರೂಪಿಸಿದ್ದಾರೆ ಗಣಪತಿ,ಇದರಿಂದ ಸಕ್ಸಸ್ ಆಗಿದ್ದಾರೆ.
ಆದರೆ ಗಣಪತಿಯವರು ನಾಯಿಗೆ ಯಾವತ್ತೂ ಹುಲಿ ರೂಪವನ್ನು ಕೊಟ್ಟಿದ್ದರೋ ಆವತ್ತಿನಿಂದ ಕೋತಿಗಳು ಮನೆ ಕಡೆ ತಲೆಹಾಕಿ ಮಲಗುತ್ತಿಲ್ಲ ಎನ್ನುವುದು ಇವರ ಅಭಿಪ್ರಾಯ. ಒಟ್ಟಾರೆ ಹೊಸತನದ ಹೊಸ ಪ್ರಯೋಗ ಕೋತಿಗಳಿಂದ ಕೃಷಿಯನ್ನು ರಕ್ಷಿಸಿಕೊಳ್ಳಲು ಈ ತಂತ್ರ ಯಶಸ್ವಿಯಾಗಿದೆ ಎನ್ನಬಹುದು,
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
05/11/2020 06:33 pm