ಉಡುಪಿ: ಮಹಾಮಳೆಗೆ ತುತ್ತಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇದೀಗ ಮಳೆ ಕ್ಷೀಣಿಸಿದೆ.
ನಿನ್ನೆ ರಾತ್ರಿಯಿಂದಲೇ ಮಳೆಯ ರೌದ್ರಾವತಾರ ಕಡಿಮೆಯಾಗುತ್ತಾ ಬಂದಿದ್ದು,ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಈ ಮಧ್ಯೆ ಮಳೆ ವಿರಾಮ ನೀಡಿದ ಬಳಿಕ ಜನರು ತಮ್ಮ ಮನೆಗಳಿಗೆ ವಾಪಸಾಗುವ ದೃಶ್ಯ ಕಂಡುಬಂತು.
ಜಿಲ್ಲಾಧಿಕಾರಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯವರು ರಾತ್ರಿ ಹೊತ್ತು ಮನೆಯಲ್ಲಿ ಉಳಿಯದಂತೆ ನಿನ್ನೆಯೇ ಮನವಿ ಮಾಡಿದ್ದರು.
ಅದರಂತೆ, ನಿನ್ನೆ ಮನೆ ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಿದ್ದ ಕುಟುಂಬಗಳು ಬೆಳಗ್ಗಿನ ಹೊತ್ತಿಗೆ ತಮ್ಮ ವಸ್ತುಗಳನ್ನು ಹಿಡಿದುಕೊಂಡು ಮನೆಗೆ ವಾಪಸಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು, ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು,ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Kshetra Samachara
21/09/2020 08:03 am