ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡ್ಕೂರಿನಲ್ಲಿ ಚಿರತೆ ದಾಳಿ: ವೃದ್ದನಿಗೆ ಗಂಭೀರ ಗಾಯ!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ಮುಲ್ಲಡ್ಕ ಎಂಬಲ್ಲಿ ಚಿರತೆಯೊಂದು ಹಿರಿಯರೊಬ್ಬರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಂಭವಿಸಿದೆ. ಇಲ್ಲಿನ ಕೃಷ್ಣ ಶೆಟ್ಟಿ ಎಂಬ ವೃದ್ದ ಚಿರತೆ ದಾಳಿಗೆ ಒಳಗಾದವರು.ಇವರು ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿದ್ದು ಸ್ಥಳೀಯರು ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.ಸದ್ಯ ಗಾಯಗೊಂಡ ‌ ಕೃಷ್ಣ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಪರಿಸರದಲ್ಲಿ ಇನ್ನೆರಡು ಚಿರತೆಗಳು ಓಡಾಡುತ್ತಿವೆ ಎಂದು ಹೇಳಲಾಗುತ್ತಿದ್ದು ಸ್ಥಳೀಯರು ಚಿರತೆಯನ್ನು ‌ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

09/09/2022 12:57 pm

Cinque Terre

32.84 K

Cinque Terre

0

ಸಂಬಂಧಿತ ಸುದ್ದಿ