ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಗಾಳಿಯ ರಭಸಕ್ಕೆ ಸಿಲುಕಿ ಬಂಡೆಗೆ ಢಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಘಟನೆಯಿಂದ ದೋಣಿ ಮುಗುಚಿ ಬಿದ್ದು, ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಬಳಿ ಈ ದುರ್ಘಟನೆ ಸಂಭವಿದೆ.
ಇಂದು ಬೆಳಗ್ಗೆ ಐದು ಮಂದಿ ಮೀನುಗಾರರು, ಕಾಪುವಿನಿಂದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ದೋಣಿಯ ಇಂಜಿನ್ ತಾಂತ್ರಿಕ
ದೋಷದಿಂದ ಕಾಪು ಲೈಟ್ ಹೌಸ್ ತಲುಪುತ್ತಿದ್ದಂತೆ, ಬಂಡೆಗೆ ಬಡಿದು ಮಗುಚಿ ಬಿದ್ದಿದೆ. ಈ ವೇಳೆ ಹತ್ತಿರದಲ್ಕಿದ್ದ ದೋಣಿಯವರ ಸಹಾಯದಿಂದ ಮೀನುಗಾರರು ಸೇಫಾಗಿ ಮಲ್ಪೆ ಬಂದರು ತಲುಪಿದ್ದಾರೆ. ಘಟನೆಯಿಂದ ದೋಣಿಗೆ 15 ಲಕ್ಷ ರುಪಾಯಿ ನಷ್ಟವಾಗಿದೆ.
Kshetra Samachara
27/07/2022 03:07 pm