ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಸ್ಕೂಟಿ ಸಹಿತ ಕೊಚ್ಚಿ ಹೋದ ಸವಾರ!; ಆಪತ್ಪಾಂಧವರಿಂದ ಜೀವ ರಕ್ಷಣೆ

ನೆಲ್ಯಾಡಿ: ಕಡಬ ತಾಲೂಕಿನೆಲ್ಲೆಡೆ ಭಾನುವಾರ ಭಾರಿ ಮಳೆಯಾಗಿದ್ದು, ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯಶಾಂತಿ ರಸ್ತೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಸ್ಕೂಟಿ ಸಹಿತ ಸವಾರನೊಬ್ಬ ಸೆಳೆತಕ್ಕೆ ಕೊಚ್ಚಿಕೊಂಡು ಹೋದರೂ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ!

ನಿಡ್ಲೆ ಪರಿಸರದ ವ್ಯಕ್ತಿಯೊಬ್ಬರು ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವಘಡ ನಡೆದಿದೆ. ಇದೇ ವೇಳೆ ಶಿರಾಡಿಯಲ್ಲಿ ಇತ್ತೀಚೆಗೆ ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಪತ್ತೆಗಾಗಿ ಹೋಗಿ- ಮರಳುತ್ತಿದ್ದ ಬೆಳ್ತಂಗಡಿ ತಾಲೂಕು ಬೆಳಾಲಿನ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಸ್ಕೂಟಿ ಸವಾರ ಹಾಗೂ ಆತನ ಸ್ಕೂಟಿ ಸೇಫ್ ಆಗಿದೆ.

ಪೆರಿಯಶಾಂತಿಯಲ್ಲಿ ರಸ್ತೆ ಜಲಮಯವಾಗಿದ್ದು, ನೀರು ರಭಸದಿಂದ ಹರಿಯುತ್ತಿದೆ. ಇದರಿಂದಾಗಿ ವಾಹನಗಳೆಲ್ಲವೂ ಸಾಲುಗಟ್ಟಿ ನಿಂತಿದ್ದವು. ಈ ಸಂದರ್ಭ ಬೆಳಾಲಿನ ವಿಪತ್ತು ನಿರ್ವಹಣಾ ತಂಡ ಸದಸ್ಯರು ಸಂಚಾರ ಸುವ್ಯವಸ್ಥೆಗೆ ಸಹಕರಿಸಿದ್ದಾರೆ. ತಂಡದ ಸೇವಾ ಕೈಂಕರ್ಯಕ್ಕೆ ಸಾಮಾಜಿಕ ಜಾಲತಾಣ ಸಹಿತ ಪರಿಸರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

15/11/2021 05:45 pm

Cinque Terre

25.69 K

Cinque Terre

1

ಸಂಬಂಧಿತ ಸುದ್ದಿ