ಉಡುಪಿ:ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಬರೋಬ್ಬರಿ ಆರು ತಿಂಗಳ ಕಾಲ ಮಳೆ ಬಿದ್ದಿದೆ.ಮೇ 20ರ ನಂತರ ಆರಂಭಗೊಂಡ ಮಳೆ ಅಕ್ಟೋಬರ್ ಅಂತ್ಯದವರೆಗೂ ಈ ಬಾರಿ ದಾಖಲೆ ಮಳೆ ಸುರಿದಿದೆ. ಇದೀಗ ಉಡುಪಿ ಜಿಲ್ಲೆಯಾದ್ಯಂತ ಮಂಜು ಮುಸುಕಿದ ವಾತಾವರಣ ಕಾಣಿಸಿಕೊಂಡಿದೆ. ಮುಂಜಾನೆ ಮಂಜು ಮುಸುಕಿದರೆ ಆ ವರ್ಷದ ಮಳೆ ಮುಗೀತು ಎಂಬುದು ಲೆಕ್ಕಾಚಾರ. ಉಡುಪಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದಟ್ಟವಾದ ಮಂಜು ಹಬ್ಬಿದೆ. ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತಲಿನ ಜನವಸತಿ ಪ್ರದೇಶ, ಗದ್ದೆಗಳಲ್ಲಿ ಮಂಜು ಕವಿದಿರುವ ದೃಶ್ಯ ಕಂಡುಬಂತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಬೆಳಗ್ಗೆ ವಾಕ್ , ಜಾಗಿಂಗ್ ಮಾಡುವ ಮಂದಿ ಈ ವಾತಾವರಣವನ್ನು ಎಂಜಾಯ್ ಮಾಡಿದರು.
Kshetra Samachara
29/10/2020 10:31 am